ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ರೆಸಾರ್ಟ್ ರಾಜಕೀಯ 12 ಜನ ಗ್ರಾ.ಪಂ ಸದಸ್ಯರು ಎಸ್ಕೇಪ್

ಕುಂದಗೋಳ : ತಾಲೂಕಿನ ಹಿರೇಹರಕುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ಬ.ವರ್ಗ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಪ್ರಕಟವಾಗಿದ್ದು ನಾಳೆ ಗ್ರಾಮ ಪಂಚಾಯಿತಿ ಗದ್ದುಗೆಗೆ ಚುನಾವಣೆ ನಿಗದಿಯಾಗಿದೆ.

ಹಿರೇಹರಕುಣಿ 12 ಚಿಕ್ಕಹರಕುಣಿ 1 ಸ್ಥಾನ ಒಳಗೊಂಡ ಗ್ರಾಮ ಪಂಚಾಯಿತಿ ಸದಸ್ಯರ ಪೈಕಿ ಕಳೆದ 15 ದಿನಗಳಿಂದ 12 ಜನ ಸದಸ್ಯರ ಎರೆಡು ತಂಡಗಳಾಗಿ ಕಣ್ಮರೆಯಾಗಿದ್ದಾರೆ. ಇದರಲ್ಲಿ 6 ಜನ ಪುರುಷರು 7 ಜನ ಮಹಿಳಾ ಸದಸ್ಯರಿದ್ದು ಎರಡೂ ಸ್ಥಾನಕ್ಕೂ ಪೈಪೋಟಿ ಹೆಚ್ಚಿದೆ.

ಕೇವಲ ಒಬ್ಬ ಯುವ ಸದಸ್ಯ ಸಂಗನಗೌಡ ಶಿರಕೋಳ ಮಾತ್ರ ಊರಲ್ಲಿ ಸ್ವಂತಂತ್ರವಾಗಿದ್ದಾರೆ.

ಈ ಎಲ್ಲ ಸ್ಥಿತಿ ಗತಿ ಗಮನಿಸಿದ್ರೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿಯಲು ಕಸರತ್ತು ಜೋರಾಗಿದ್ದು, ಸೂಕ್ತ ಬೆಂಬಲಕ್ಕಾಗಿ ಸದಸ್ಯರನ್ನು ಹುಬ್ಬಳ್ಳಿಗೆ ಹಾಗೂ ಇತರ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದೊಯ್ಯಲಾಗಿದೆ ಎಂಬ ಗಾಳಿ ಸುದ್ಧಿ ಹರಿದಾಡುತ್ತಿದೆ.

ಒಟ್ಟು ಎರೆಡು ತಂಡಗಳಲ್ಲಿ ಎಷ್ಟೇಷ್ಟು ? ಜನ ಸದಸ್ಯರಿದ್ದಾರೆ ಎಂಬ ಸೂಕ್ತ ಮಾಹಿತಿ ಲಭ್ಯವಾಗಿಲ್ಲ, ಹಳ್ಳಿಗಳಲ್ಲೂ ರೆಸಾರ್ಟ್ ರಾಜಕೀಯ ಅಲೆ ಎಂದಿದ್ದು ನಾಳೆ ನಾಮಿನೇಷನ್ ಪಕ್ರಿಯೆ ಎಡೆಗೆ ಜನ ಸಾಮಾನ್ಯರ ಕಣ್ಣು ನೆಟ್ಟಿದೆ.

Edited By : Manjunath H D
Kshetra Samachara

Kshetra Samachara

03/02/2021 10:20 pm

Cinque Terre

25.43 K

Cinque Terre

0

ಸಂಬಂಧಿತ ಸುದ್ದಿ