ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಿದ ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಚರ್ಮ ಉತ್ಪನ್ನಗಳ ತಯಾರಿಕಾ ತರಬೇತಿ ಪಡೆದ 29 ಮಹಿಳಾ ಫಲಾನುಭವಿಗಳಿಗೆ ಮಧುರಾ ಕಾಲೋನಿಯ ಗೃಹ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೊಲಿಗೆ ಯಂತ್ರ, ಸಲಕರಣೆ ಪೆಟ್ಟಿಗೆ ಹಾಗೂ ಅರ್ಹತಾ ಪತ್ರಗಳನ್ನು ವಿತರಿಸಿದರು.

ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದಿಂದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ ವ್ಯಾಪ್ತಿಯ ರಾಮನಗರದ 29 ಮಹಿಳೆಯರಿಗೆ ಒಟ್ಟು 10.5 ಲಕ್ಷ ವೆಚ್ಚದಲಿ 60 ದಿನಗಳ ಚರ್ಮ ತಯಾರಿಕಾ ತರಬೇತಿಯನ್ನು ಆಯೋಜಿಸಲಾಗಿತ್ತು. ಪ್ರತಿ ಫಲಾನುಭವಿಗೆ ತರಬೇತಿ ಅವಧಿಯಲ್ಲಿ 6,000 ರೂ. ಭತ್ಯೆಯನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ತರಬೇತಿ ನಂತರ 17,500 ರೂ. ಮೌಲ್ಯದ ಹೊಲಿಗೆ ಯಂತ್ರ ಹಾಗೂ ಸಲಕರಣೆ ಪೆಟ್ಟಿಗೆಯನ್ನು ನೀಡಲಾಗಿದೆ.

ಈ ಸಂದರ್ಭದಲ್ಲಿ ಸಚಿವರ ಪತ್ನಿ ಶಿಲ್ಪಾ ಜಗದೀಶ್ ಶೆಟ್ಟರ್, ಲಿಡ್ಕರ್ ಜಿಲ್ಲಾ ಸಂಯೋಜಕ ಎ.ಎಸ್.ರುದ್ರೇಶ್, ಮುಖಂಡರುಗಳಾದ ಲಿಂಗರಾಜ ಪಾಟೀಲ, ಸಂತೋಷ್ ಚವ್ಹಾಣ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

31/01/2021 04:02 pm

Cinque Terre

11.54 K

Cinque Terre

0

ಸಂಬಂಧಿತ ಸುದ್ದಿ