ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗಡಿ ವಿಚಾರ ಮುಗಿದ ಹೋದ ಅಧ್ಯಾಯ! ಉದ್ದವ ಠಾಕ್ರೆಗೆ ಬುದ್ದಿ ಇದೆಯಾ? ಸಚಿವ ಜಗದೀಶ್ ಶೆಟ್ಟರ್ ಪ್ರಶ್ನೆ

ಹುಬ್ಬಳ್ಳಿ- ಪೋಲಿಯೋ ದಿನದ ಅಂಗವಾಗಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಭಾರತ ಪಲ್ಸ್ ಪೋಲಿಯೊ ದಿಂದ ಮುಕ್ತವಾಗಿದೆ. ಬಾಂಗ್ಲಾ ಮತ್ತು ಪಾಕಿಸ್ತಾನದಲ್ಲಿ ಪಲ್ಸ್ ಪೋಲಿಯೋ ಸಮಸ್ಯ ಇನ್ನೂ ಇದ್ದರಿಂದ ಭಾರತ ದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಪಲ್ಸ್ ಪೋಲಿಯೋ ಅಭಿಯಾನವನ್ನು ಪ್ರತಿವರ್ಷ ಹಮ್ಮಿಕೊಳ್ಳಿಲಾಗಿದೆ. ಆದಷ್ಟು ಬೇಗ ಭಾರತ ಪೋಲಿಯೋ ದಿಂದ ಸಂಪೂರ್ಣವಾಗಿ ಹೊರ ಬರಲಿದೆ. ಎಂದರು. ಇನ್ನೂ ಧಾರವಾಡ ಜಿಲ್ಲೆಯಲ್ಲಿ ಎರಡು ಲಕ್ಷಿಕ್ಕಿಂತ ಹೆಚ್ಚು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಕಾರ್ಯ ನಡೆಯುತ್ತಿದೆ ಎಂದರು....

ಮಹಾರಾಷ್ಟ್ರ ಸಿಎಂ ಗಡಿ ವಿಚಾರದ ಬಗ್ಗೆ ಮಾತನಾಡಿದ ಅವರು, ಸಂಬಂಧಿಸಿದಂತೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಅಸ್ಥಿರತೆ ಮತ್ತು ರಾಜಕೀಯ ಹಿನ್ನಡೆಯಾದಾಗ ಇಂತಹ ಗಡಿ ವಿಚಾರದ ಹೇಳಿಕೆಗಳು ಹೊರ ಬೀಳುತ್ತವೆ. ಗಡಿ ವಿಚಾರ ಇದು ಮುಗಿದು ಹೋದ ಅಧ್ಯಾಯ, ಉದ್ದವ ಠಾಕ್ರೆಗೆ ಬುದ್ದಿ ಇದೆಯಾ? ಕನ್ನಡಿಗರು ಮತ್ತು ಮರಾಠರ ನಡುವೆ ವೈರತ್ವ ಬೆಳೆಸುವುದನ್ನು ಬಿಟ್ಟು ಮಹಾರಾಷ್ಟ್ರ ಸಿಎಂ ಉದ್ದವ ಠಾಕ್ರೆ ಕೊರೊನಾವನ್ನು ನಿಯಂತ್ರಣ ಮಾಡುವ ಕೆಲಸ ಮಾಡಲಿ, ಇಂತಹ ಹೇಳಿಕೆಗಳು ಮೂರ್ಖತನದ ಪರಮಾವಧಿ ಎಂದರು. ಅಲ್ಲಿನ ಸರ್ಕಾರಕ್ಕೆ ಪಾಪ್ಯುಲಾರಟಿ ಕಳೆದುಕೊಂಡಿದೆ. ಸರ್ಕಾರದ ಬಗ್ಗೆ ಜನರ ಆಕ್ರೋಶವಿರುವ ಕಾರಣ ಇಂತಹ ಹೇಳಿಕೆ ನೀಡಿ ಜನರ ಗಮನ ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ‌ ಎಂದು ಉದ್ದವ ಠಾಕ್ರೆ ವಿರುದ್ಧ ಕಿಡಿ ಕಾರಿದ್ದಾರೆ.

ಪೆ.1 ರಂದು ನಡೆಯುವ ಕೇಂದ್ರ ಸರ್ಕಾರ ಬಜೆಟ್ ಮಂಡನೆ ಬಗ್ಗೆ ಮಾತನಾಡಿದ ಅವರು, ರಾಜ್ಯಕ್ಕೆ ಏಮ್ಸ್ ಬರುವ ನಿರೀಕ್ಷೆ ಇದೆ ಬಂದ್ರೇ ರಾಜ್ಯಕ್ಕೆ ಒಳಿತಾಗುತ್ತೆ, ಫಾರ್ಮೋ ಫಾರ್ಕ್ ದಂತಹ ಇನ್ನಿತರ ದೊಡ್ಡ ಮಟ್ಟದ ಪ್ರಾಜೆಕ್ಟ್ ನೀಡಿದರೆ, ಕೈಗಾರಿಕೆ ಕ್ಷೇತ್ರಕ್ಕೆ ಅನುಕೂಲ ಆಗುತ್ತೆ, ಇದರ ಬಗ್ಗೆ ಕೇಂದ್ರ ಸರ್ಕಾರ ಮನವಿ ಸಹ ಸಲ್ಲಿಸಲಾಗಿದೆ ಎಂದರು...

Edited By : Nagesh Gaonkar
Kshetra Samachara

Kshetra Samachara

31/01/2021 03:01 pm

Cinque Terre

34.51 K

Cinque Terre

1

ಸಂಬಂಧಿತ ಸುದ್ದಿ