ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಿ

ಧಾರವಾಡ: ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಆಗ್ರಹಿಸಿ ದೇವರ ದಾಸೀಮಯ್ಯ ನೇಕಾರ ಅಭಿವೃದ್ಧಿ ಟ್ರಸ್ಟ್ ಕಮಿಟಿ ಸದಸ್ಯರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಸುಮಾರು 30 ಲಕ್ಷಕ್ಕಿಂತ ಹೆಚ್ಚು ಜನ ದೇವಾಂಗ ಸಮುದಾಯದವರು ಇದ್ದಾರೆ. ಈ ದೇವಾಂಗ ಸಮುದಾಯ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ತೀರಾ ಹಿಂದುಳಿದು ಸಂಕಷ್ಟಗಳ ಸರಮಾಲೆ ಆನುಭವಿಸುತ್ತಿರುವ ಸಮಾಜ, ಈ ಹಿಂದೆ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ಮಂಡಳ ಇಲಾಖೆಯ ಯೋಜನೆಯಲ್ಲಿ ದೇವಾಂಗ ಸಮುದಾಯಕ್ಕೆ ಇದ್ದ ಮೀಸಲಾತಿಯನ್ನು ಸುಮಾರು ನಾಲ್ಕೈದು ವರ್ಷಗಳ ಹಿಂದೆ ರದ್ದುಗೊಳಿಸಲಾಗಿದೆ.

ಮೂಲ ನೇಕಾರ ಆದ ನಮಗೆ ಅಂದರೆ ದೇವಾಂಗ ಸಮುದಾಯದವರಿಗೆ ಸರ್ಕಾರದಿಂದ ಯಾವುದೇ ರೀತಿಯಿಂದಲೂ ಮಿಸಲಾತಿ ಕಲ್ಪಸಿಲ್ಲ ಮೂಲ ನೇಕಾರರಾದ ದೇವಾಂಗ ಸಮುದಾಯದ ಜೀವನ ಸ್ಥಿತಿ ಅಯೋಮಯವಾಗಿದೆ. ಆದ್ದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ದೇವಾಂಗ ಆಭಿವೃದ್ಧಿ ನಿಗಮ ಮಂಡಳಿಯನ್ನು ಸ್ಥಾಪಿಸಿ ಸಮಾಜದ ಉನ್ನತಿಗೆ ಸಹಕರಿಸಬೇಕು ಎಂದು ಆಗ್ರಹಿಸಿದರು.

Edited By : Manjunath H D
Kshetra Samachara

Kshetra Samachara

30/01/2021 02:04 pm

Cinque Terre

16.44 K

Cinque Terre

0

ಸಂಬಂಧಿತ ಸುದ್ದಿ