ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸುಪ್ರೀಂಗೆ ಸಂಪೂರ್ಣ ವರದಿ ನೀಡಿ: ಇಮ್ರಾನ್

ಧಾರವಾಡ: ಹುಬ್ಬಳ್ಳಿ, ಧಾರವಾಡ ಬೈಪಾಸ್ ರಸ್ತೆಗೆ ಸಂಬಂಧಿಸಿದಂತೆ ವರದಿ ಕೇಳಿರುವ ಸುಪ್ರೀಂಕೋರ್ಟ್ ಗೆ ಸರ್ಕಾರ ತ್ವರಿತಗತಿಯಲ್ಲಿ ಸಂಪೂರ್ಣ ವರದಿ ನೀಡಬೇಕು ಎಂದು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಇಮ್ರಾನ್ ಕಳ್ಳಿಮನಿ ಆಗ್ರಹಿಸಿದರು.

ಪಬ್ಲಿಕ್ ನೆಕ್ಸ್ಟ್ ಗೆ ಪ್ರತಿಕ್ರಿಯೆ ನೀಡಿದ ಇಮ್ರಾನ್, ಧಾರವಾಡದ ನರೇಂದ್ರ ಟೋಲ್ ನಿಂದ ಗಬ್ಬೂರಿನವರೆಗೆ ಇರುವ ಬೈಪಾಸ್ ಅದು ಸಾವಿನ ಬೈಪಾಸ್ ಆಗಿದೆ. ಇದುವರೆಗೂ ಆ ರಸ್ತೆಯಲ್ಲಿ ನೂರಾರು ಅಪಘಾತಗಳು ಸಂಭವಿಸಿ ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದು ಅಷ್ಟಪಥ ರಸ್ತೆಯಾಗಬೇಕು ಎಂದು ನಾವು ಕಾಂಗ್ರೆಸ್ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದೆವು. ಇದಕ್ಕೆ ಯಶಸ್ಸು ಸಿಕ್ಕಿದೆ ಎನ್ನಬಹುದು. ಏಕೆಂದರೆ ಸುಪ್ರೀಂ ಕೋರ್ಟ್ ನೇರವಾಗಿ ಸರ್ಕಾರಕ್ಕೆ ವರದಿ ಕೇಳಿದೆ. ಇದರಲ್ಲಿ ರಾಜಕೀಯ ಮಾಡದೇ ಎಲ್ಲ ಪಕ್ಷದ ನಾಯಕರು ಸುಪ್ರೀಂಕೋರ್ಟ್ ಗೆ ತ್ವರಿತಗತಿಯಲ್ಲಿ ಸಂಪೂರ್ಣ ವರದಿ ನೀಡಬೇಕು ಎಂದು ಇಮ್ರಾನ್ ಆಗ್ರಹಿಸಿದರು.

Edited By : Nagesh Gaonkar
Kshetra Samachara

Kshetra Samachara

29/01/2021 03:46 pm

Cinque Terre

30.6 K

Cinque Terre

6

ಸಂಬಂಧಿತ ಸುದ್ದಿ