ಕಲಘಟಗಿ ತಾಲೂಕಿನ ಜೋಡಳ್ಳಿ ಗ್ರಾಮದ ಸಂಗಮೇಶ್ವರ ಪ್ರೌಢಶಾಲೆ ಸರ್ಕಾರದ ಅನುದಾನ ಪಡೆದು ಈ ಹಿಂದೆ ಕಾರ್ಯ ನಿರ್ವಹಿಸುತ್ತಿತ್ತು.
ಸದ್ಯ ಈ ಅನುದಾತ ಬಾರದಿರುವುದಕ್ಕೆ ಶಾಲೆಯನ್ನು ಬಂದ್ ಮಾಡಿ ಇಲ್ಲಿ ಪಾಠ ಮಾಡುತ್ತಿದ್ದ ಶಾಲೆ ಶಿಕ್ಷಕರು ಬೇರೆ ಶಾಲೆಗೆ ನಿಯುಕ್ತಿಗೊಂಡಿದ್ದಾರೆ ಸದ್ಯ ಈ ಶಾಲೆಯನ್ನು ಮರುಪ್ರಾರಂಭ ಮಾಡಿವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಿದರು.
ಬೆಳಿಗ್ಗೆ ರಸ್ತೆಗಿಳಿದ ಸಂಗಮೇಶ್ವರ ಶಾಲೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಶಾಲೆಯನ್ನು ಪ್ರಾರಂಭಿಸ ಬೇಕು ಎಂದು ಒತ್ತಾಯಿಸಿದರು.ಶಾಲೆ ಪ್ರಾರಂಭಿಸಲು ಸರಕಾರ ಕ್ರಮಕೈಗೊಳ್ಳವವರೆಗೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಎರಡು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ಮಾಡಿದ ಪರಿಣಾಮ ಧಾರವಾಡ ಕಲಘಟಗಿಗೆ ಪ್ರಾಯಾಣಿಸುವ ಜನರಿಗೆ ಅಡಚಣೆ ಉಂಟಾಯಿತು.ಸಿ ಪಿ ಐ ಪ್ರಭು ಸೂರಿನ ಸ್ಥಳಕ್ಕೆ ಭೇಟಿ ನೀಡಿ ಬಂದೋಬಸ್ತ ಮಾಡಿದರು.
Kshetra Samachara
25/01/2021 04:16 pm