ಹುಬ್ಬಳ್ಳಿ:ಬೆಳಗಾವಿಯನ್ನು ಅವರ ಅಪ್ಪನಿಂದಲೇ ಪಡೆಯಲು ಆಗಿಲ್ಲ. ಇನ್ನೂ ಅವರ ಮಗನಿಂದ ಪಡೆಯಲು ಸಾಧ್ಯನಾ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ ಉದ್ದವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾತನಾಡಿದ ಅವರು, ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಜನಪ್ರಿಯತೆ ಕುಗ್ಗುತ್ತಿದೆ. ಹೀಗಾಗಿ ರಾಜಕೀಯವಾಗಿ ಬೆಳೆಯಲು ಗಡಿ ತಂಟೆ ತೆಗೆಯುತ್ತಿದ್ದಾರೆ.ಅವರಂತೆ ನಾವೇನು ಸಾಂಗ್ಲಿ, ನಾಗಪುರ ಪಡೆಯುತ್ತೇವೆ ಎನ್ನಲ್ಲ.ನಾವು ಕಾನೂನುಬದ್ಧವಾಗಿಯೇ ನಡೆದುಕೊಳ್ಳುವವರು. ಮಹಾಜನ ವರದಿ ಅಂತಿಮ. ಇದನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಇದನ್ನು ಬಿಟ್ಟು ಅವರಂತೆ ಬೇಕಾಬಿಟ್ಟಿ ಮಾತಾಡಲ್ಲ ಎಂದರು.
Kshetra Samachara
19/01/2021 07:22 pm