ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ :ಅವ್ಯವಹಾರದ ತನಿಖೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

ಕುಂದಗೋಳ : ತಾಲೂಕಿನ ಬು.ತರ್ಲಘಟ್ಟ ಗ್ರಾಮ ಪಂಚಾಯಿತಿ 14ನೇ ಹಣಕಾಸಿನಲ್ಲಿ ಅವ್ಯವಹಾರ ನಡೆದಿದೆ. ಈ ಬಗ್ಗೆ ಶೀಘ್ರ ತನಿಖೆ ಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೆ ದಾಖಲೆ ಸಮೇತ ಮನವಿ ಪತ್ರ ಬರೆದರೂ ದಿನ ಕಳೆದರೆ ಹೊರತು ಇಂದಿಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಬು.ತರ್ಲಘಟ್ಟ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಿದ್ದಣ್ಣ ಕಳಸಣ್ಣನವರ ಹಾಗೂ ಗ್ರಾಮಸ್ಥರು ಪಂಚಾಯಿತಿ ಎದುರೆ ಗ್ರಾಮಸ್ಥರ ಸಮ್ಮುಖದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡರು.

ಬೆಳಿಗ್ಗೆಯಿಂದಲೇ ಉಪವಾಸ ಸತ್ಯಾಗ್ರಹದ ಆರಂಭಿಸಿದ ಗ್ರಾಮಸ್ಥರು, ಪಂಚಾಯಿತಿ ಈ ಹಿಂದಿನ ಅವಧಿಯಲ್ಲಿ ಅವ್ಯವಹಾರ ನಡೆದಿದೆ. ಗ್ರಾಮ ಪಂಚಾಯಿತಿ ಸ್ವಂತನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಿ ಕಂಪ್ಯೂಟರ್ ಉತಾರ ಪೂರೈಸಲಾಗಿದೆ. ಶೌಚಾಲಯ ನಿರ್ಮಾಣ ಮಾಡದೆ ಬೋಗಸ್ ಹಣ ಬಿಲ್ ಪಾಸ್ ಮಾಡಲಾಗಿದೆ ಎಂದು ಆರೋಪಿಸಿ ಸ್ಥಳಕ್ಕೆ ಮೇಲಾಧಿಕಾರಿಗಳು ಆಗಮಿಸುವಂತೆ ಪಟ್ಟು ಹಿಡಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಪ್ರತಿಭಟನಾ ನಿರತರನ್ನು ಸಮಾಧಾನ ಪಡಿಸಲು ಯತ್ನಿಸಿದರು, ಗ್ರಾಮಸ್ಥರು ತನಿಖೆ ಕೈಗೊಳ್ಳಿ ಇಲ್ಲವೆ ನಮಗೆ ವಿಷ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Edited By : Nagesh Gaonkar
Kshetra Samachara

Kshetra Samachara

15/01/2021 05:56 pm

Cinque Terre

28.24 K

Cinque Terre

0

ಸಂಬಂಧಿತ ಸುದ್ದಿ