ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕುರುಬರಿಗೆ ಸಚಿವ ಸ್ಥಾನ ನೀಡದಿದ್ದರೇ ತೊಂದರೇ ಆಗುತ್ತದೆ: ಬಸವರಾಜ ದೇವರ ಭವಿಷ್ಯ

ಹುಬ್ಬಳ್ಳಿ: ಹಿಂದಿನ ಮೂರು ಸರ್ಕಾರಕ್ಕೆ ಕುರುಬರ ಸಹಕಾರ ಇತ್ತು.ಈಗ ಕೂಡ ಬಿಜೆಪಿ ಸರ್ಕಾರವನ್ನು ಗಟ್ಟಿಗೊಳಿಸಲು ಕುರುಬರ ಸರ್ಕಾರವೇ ಕಾರಣ.ಸಚಿವ ಸಂಪುಟದಲ್ಲಿ ಮೂವರು ಕುರುಬ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮನಸೂರಿನ ಮಠದ ಬಸವರಾಜ್ ದೇವರು ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಟೀಕೆಗಳಿಗೆ ಒಳಗಾಗಿ ಸರ್ಕಾರ ತಂಡದವರಿಗೆ ಸಚಿವ ಸ್ಥಾನ ನೀಡಲು ಆಗ್ರಹಿಸುತ್ತೇನೆ.ಸರ್ಕಾರ ರಚನೆಯಲ್ಲಿ ಕುರುಬ ಶಾಸಕರು ಸಹಕಾರ ಮಹತ್ವವಾಗಿದೆ.ಎಂ.ಟಿ.ಬಿ ನಾಗರಾಜ್ ಸಚಿವ ಸ್ಥಾನ ತ್ಯಾಗ ಮಾಡಿ ಪಕ್ಷ ಸೇರಿದ್ದಾರೆ.ಅಲ್ಲದೇ ಎಚ್.ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಷರಿದ್ದವರು ಹಾಗೂ ಹಿರಿಯ ಮುಖಂಡರು ಆರ್. ಶಂಕರ್ ಗೆ ಕ್ಷೇತ್ರ ತ್ಯಾಗ ಮಾಡಿದ್ದಾರೆ. ಇವರಿಗೆ ಸಚಿವ ಸ್ಥಾನ ಕೊಡದೇ ಇದ್ದರೆ, ಸರ್ಕಾರಕ್ಕೆ ತೊಂದರೆ ಆಗುತ್ತದೆ ಎಂದು ಅವರು ಭವಿಷ್ಯ ನುಡಿದರು.

ಸಿದ್ದರಾಮಯ್ಯ ಅವರಿಗೆ ಕುರುಬರು ಬೆಂಬಲಿಸಿದ್ದಕ್ಕೆ ಸರ್ಕಾರ ಬಂತು.ಹೆಚ್‌ಡಿ ಕುಮಾರಸ್ವಾಮಿ ಸರ್ಕಾರ ಬರಲು ಕುರಬರೇ ಕಾರಣ.ಇದೀಗ ಬಿಜೆಪಿ ಸರ್ಕಾರಕ್ಕೆ ಬಹುಮತ ಇರಲಿಲ್ಲ.ನಮ್ಮ ನಾಯಕರು ಹೋಗಿ ಸರ್ಕಾರ ಗಟ್ಟಿಗೊಳಿಸಿದ್ದಾರೆ ಎಂದರು.

Edited By : Nagesh Gaonkar
Kshetra Samachara

Kshetra Samachara

09/01/2021 03:14 pm

Cinque Terre

21.1 K

Cinque Terre

4

ಸಂಬಂಧಿತ ಸುದ್ದಿ