ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನನ್ನದು ಕೊನೆ ಅವಧಿಯಲ್ಲ.ಮತ್ತೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ: ಹೊರಟ್ಟಿ ವಿಶ್ವಾಸ

ಹುಬ್ಬಳ್ಳಿ: ನಾನು ಸಭಾಪತಿಯಾಗುವುದಕ್ಕೆ ಶೇ 90 ರಷ್ಟು ಸದಸ್ಯರ ಸಹಮತವಿದೆ.ಇದು ನನ್ನದು ಕೊನೆಯ ಅವಧಿ ಅಲ್ಲ.ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು,ಪರಿಷತ್ ಸಭಾಪತಿ ಆಯ್ಕೆಯನ್ನು ಜೆಡಿಎಸ್ ನವರನ್ನು ಬಿಟ್ಟು ಮಾಡಲು ಸಾಧ್ಯವಿಲ್ಲ.ಬಸವರಾಜ ಹೊರಟ್ಟಿಯವರು ಪರಿಷತ್ ಸಭಾಪತಿ ಆಗುವುದಕ್ಕೆ ಮೂರು ಪಕ್ಷದಿಂದ ಸಹಮತವಿದೆ ಎಂದರು.

ನಾನು ಹಿರಿಯ ಸದಸ್ಯ ಎನ್ನುವ ಕಾರಣಕ್ಕೆ ಅವಿರೋಧ ಆಯ್ಕೆಗೆ ಮೂರು ಪಕ್ಷದವರು ಸಹಮತ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ವರಿಷ್ಠ ದೇವೆಗೌಡರು ನನ್ನನ್ನ ಸಭಾಪತಿ ಮಾಡುವ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ ಎನ್ನುವುದನ್ನ ಕೇಳಿದ್ದೇನೆ ಎಂದ ಅವರು

ಪರಿಷತ್ ಸಭಾಪತಿಯನ್ನು ಕೆಳಗಿಳಿಸುವಾಗ ಬಿಜೆಪಿ ಜೊತೆಗೆ ಹೊಂದಾಣಿಕೆ ಆಗಿತ್ತು ಎಂದು ಅವರು ಹೇಳಿದರು.

ಇನ್ನೂ ಜೆಡಿಎಸ್ ಬಿಜೆಪಿ ಮೈತ್ರಿ ಕುರಿತು ಮಾತನಾಡಿದ ಅವರು,ಜೆಡಿಎಸ್ ಬಿಜೆಪಿ ಮೈತ್ರಿ ಆಗಲಿ ವಿಲೀನವಾಗಲಿ ಏನು ಇಲ್ಲ.ಜೆಡಿಎಸ್ ಬಿಜೆಪಿ ಮೈತ್ರಿ ಎನ್ನುವುದು ಕೇವಲ ಗಾಳಿಸುದ್ದಿ ಅಷ್ಟೇ ಎಂದರು.

Edited By : Manjunath H D
Kshetra Samachara

Kshetra Samachara

07/01/2021 01:28 pm

Cinque Terre

31.94 K

Cinque Terre

1

ಸಂಬಂಧಿತ ಸುದ್ದಿ