ಹುಬ್ಬಳ್ಳಿ: ಸಣ್ಣ ಕೈಗಾರಿಕೆಗಳಿಗೆ ಸದಾ ಉತ್ತೇಜನ ನೀಡುವ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ಗೆ ಇಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ಆಗಮಿಸಿದ್ದರು. ಫೌಂಡೇಶನ್ ನಲ್ಲಿಯ ಸಣ್ಣ ಉದ್ಯಮಕ್ಕೆ ಕೊಟ್ಟಿರೋ ಉತ್ತೇಜನ ಮತ್ತು ಕೌಶಲ್ಯಾಭಿವೃದ್ದಿಯ ಸೂಕ್ತ ವ್ಯವಸ್ಥೆಯನ್ನ ಕಂಡು ಮನಸಾರೆ ಕೊಂಡಾಡಿದರು.
ದೇಶಪಾಂಡೆ ಫೌಂಡೇಶನ್ ನಲ್ಲಿ ಒಳ್ಳೆ ವ್ಯವಸ್ಥೆ ಇದೆ.ಸಣ್ಣ ಉದ್ಯಮಕ್ಕೆ ಇಲ್ಲಿ ಉತ್ತೇಜನ ಸಿಗುತ್ತಿದೆ. ಇಂದು ಫೌಂಡೇಶನ್ ನ ಕಾರ್ಯವೈಖರಿಯನ್ನ ವೀಕ್ಷಿಸಿದ್ದೇನೆ. ಇದೇ ಮಾದರಿಯಲ್ಲಿ ನಮ್ಮ ಶಿವಮೊಗ್ಗದಲ್ಲೂ ಸಣ್ಣ ಉದ್ಯಮ ಮತ್ತು ಕೌಶಲಾಭಿವೃದ್ಧಿಗೆ ವ್ಯವಸ್ಥೆ ಮಾಡಲು ಯೋಚಿಸುತ್ತಿದ್ದೇವೆ ಎಂದರು.
ದೇಶಪಾಂಡೆ ಫೌಂಡೇಶನ್ ಗೆ ಬಂದಿದ್ದ ಗ್ರಾಮೀಣಾಭಿವೃದ್ಧಿ ಸಚಿವರು ಇಲ್ಲಿಯ ವ್ಯವಸ್ಥೆ ಮತ್ತು ಯೋಚನೆ-ಯೋಜನೆ ಕಂಡು ಸಂತೋಷ ಪಟ್ಟಿದ್ದಾರೆ. ಫೌಂಡೇಶನ್ ನ ಡೆಪ್ಯೂಟಿ ಡೈರೆಕ್ಟರ್ ಈರಣ್ಣ ಅವರ ಆಹ್ವಾನದ ಮೇರೆಗೆ ಕೆ. ಎಸ್. ಈಶ್ವರಪ್ಪ ಇಲ್ಲಿಗೆ ಬಂದು ಎಲ್ಲವನ್ನೂ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Kshetra Samachara
11/11/2021 04:59 pm