ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಭಾರತದ ಪುರಾಣಗಳು ನಮಗೆ ನೀತಿಯನ್ನು ಬೋಧಿಸುತ್ತವೆ; ಮುನೇನಕೊಪ್ಪ

ನವಲಗುಂದ : ಸೋಮವಾರ ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ಶ್ರೀ ಮಜ್ಜಗದ್ಗುರು ಸಾಧು ಸಿದ್ಧಶಿವಯೋಗಿ ಅಜ್ಜನ ಜಾತ್ರಾ ಮಹೋತ್ಸದ ಪುರಾಣ ಪ್ರವಚನ ಕಾರ್ಯಕ್ರದಲ್ಲಿ ಸಚಿವ ಶಂಕರ ಪಾಟೀಲ ಮುನಿಯನಕೊಪ್ಪ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಪುರಾಣಗಳು ನಮಗೆ ನೀತಿಯನ್ನು ಬೋಧಿಸುತ್ತವೆ. ನಮಗೆ ಸರಿಯಾದ ಮಾರ್ಗದರ್ಶನ ಮಾಡುತ್ತವೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜಕ್ಕೆ ಸರಿಯಾದ ಹಾದಿಯನ್ನು ತೋರುತ್ತವೆ ಎಂದರು.

ಈ ಸಂದರ್ಭದಲ್ಲಿ ಪತ್ರಿವಣ ಮಠದ ಸಿದ್ಧವೀರಚಾರ್ಯ ಮಹಾಸ್ವಾಮಿಗಳು, ದಾಸೋಹ ಮಠದ ಶಿವಕುಮಾರ ಮಹಾಸ್ವಾಮಿಗಳು, ಹಾಗೂ ಗ್ರಾಮದ ಗುರುಲಿಂಗಯ್ಯ ಹಿರೇಮಠ, ಬಿ ಟಿ ಕುಲಕರ್ಣಿ, ಚಂದ್ರು ಜಂಗಣ್ಣವರ, ನಿಜಗುಣಿ ಗಾಡದ, ಗುರುನಾಥ ಉಳ್ಳಾಗಡ್ಡಿ, ಯಲ್ಲಪ್ಪ ಜಂತ್ಲಿ, ಸಿದ್ಧಣ ಕೆಟಗೇರಿ ಮತ್ತು ಗ್ರಾಮದ ಗುರು ಹಿರಿಯರು, ಯುವಕರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

26/07/2022 08:02 am

Cinque Terre

7.91 K

Cinque Terre

0

ಸಂಬಂಧಿತ ಸುದ್ದಿ