ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ:ಗೋಮಾಂಸ ತಿಂದ ಮುಸ್ಲಿಮರ ಮೇಲೆ ಕ್ರಮ ಕೈಗೊಳ್ಳದಿದ್ದರೆ; ದತ್ತಪೀಠ ಪ್ರವೇಶಿಸಲು ಬಿಡೋದಿಲ್ಲ!

ಧಾರವಾಡ: ಚಿಕ್ಕಮಗಳೂರಿನ ದತ್ತಪೀಠದಲ್ಲಿ ನಿನ್ನೆ ಕೆಲವೊಂದಿಷ್ಟು ಮುಸ್ಲಿಮರು ಗೋಮಾಂಸದ ಊಟ ಮಾಡಿ ಆ ಪೀಠವನ್ನು ಅಪವಿತ್ರ ಮಾಡಿದ್ದಾರೆ. ನಾವು ಆ ಪೀಠವನ್ನು ಗೋಮೂತ್ರದಿಂದ ಶುದ್ಧೀಕರಣ ಮಾಡುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ.

ಅಲ್ಲಿನ ಮುಜುರಾಯಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಕತ್ತೆ ಕಾಯುತ್ತಿವೆ. ಅಲ್ಲಿ ಗೋಮಾಂಸ ನಿಷೇಧವಿದ್ದರೂ ದತ್ತಪೀಠದಲ್ಲಿ ಕೆಲವೊಂದಿಷ್ಟು ಮುಸ್ಲಿಮರು ಗೋಮಾಂಸದ ಊಟ ಮಾಡಿ ಆ ಪುಣ್ಯ ಕ್ಷೇತ್ರವನ್ನು ಅಪವಿತ್ರ ಮಾಡಿದ್ದಾರೆ.

ಮುಜರಾಯಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ಕೂಲಂಕಶವಾಗಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದರೆ ಮುಸ್ಲಿಮರನ್ನು ದತ್ತಪೀಠ ಪ್ರವೇಶ ಮಾಡಲು ನಾವು ಬಿಡುವುದಿಲ್ಲ ಎಂದಿದ್ದಾರೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

16/05/2022 05:27 pm

Cinque Terre

68.02 K

Cinque Terre

19

ಸಂಬಂಧಿತ ಸುದ್ದಿ