ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹಿಂದೂ ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಜೋಶಿ

ಧಾರವಾಡ: ನಮ್ಮ ದೇಶದಲ್ಲಿ ಹಿಂದೂಗಳಿಗೊಂದು, ಮುಸ್ಲಿಂರಿಗೊಂದು, ಕ್ರಿಶ್ಚಿಯನ್ನರಿಗೊಂದು ಕಾನೂನಿಲ್ಲ. ಈ ದೇಶದಲ್ಲಿರುವುದು ಎಲ್ಲರಿಗೂ ಒಂದೇ ಕಾನೂನು. ಈ ಕಾನೂನಿಗೆ ಒಪ್ಪಿ ಈ ದೇಶದಲ್ಲಿ ಇರುವವರು ಇರಬಹುದು. ಒಪ್ಪದವರಿಗೆ ಬೇರೆ ದೇಶಗಳಿವೆ. ಅತ್ಯಾಚಾರ, ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡುತ್ತಿರುವವರಿಗೆ ಕಾಂಗ್ರೆಸ್ ಪಕ್ಷ ರಕ್ಷಣೆ ನೀಡುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದರು.

ಧಾರವಾಡದ ಕಡಪಾ ಮೈದಾನದಲ್ಲಿ ಹರ್ಷಾ ಹತ್ಯೆ ಖಂಡಿಸಿ ನಡೆದ ಬೃಹತ್ ಹಿಂದೂ ಸಮಾವೇಶದಲ್ಲಿ ಅವರು ಮಾತನಾಡಿದರು.

ಹರ್ಷನ ಕೊಲೆ ಆಗಬಾರದಿತ್ತು. ಆದರೆ, ಮುಂದೆ ಇಂತಹ ಕೊಲೆಗಳು ಆಗಬಾರದು ಎಂಬ ಉದ್ದೇಶದಿಂದ ಹಿಂದೂಗಳನ್ನು ಜಾಗೃತಗೊಳಿಸುವುದಕ್ಕಾಗಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ನಮ್ಮ ದೇಶದಲ್ಲಿ ಜ್ಯಾತ್ಯಾತೀತತೆ ಉಳಿಯಬೇಕು ಎಂದರೆ ಹಿಂದೂಗಳು ಮೆಜಾರಿಟಿಯಲ್ಲಿರಬೇಕು. ಯಾವ ದೇಶದಲ್ಲಿ ಇಸ್ಲಾಮಿಕ್ ಮೆಜಾರಿಟಿಯಲ್ಲಿದೆಯೋ ಅಲ್ಲಿ ಜ್ಯಾತ್ಯಾತೀತತೆ ಇಲ್ಲ. ಜ್ಯಾತ್ಯಾತೀತತೆ ಬಗ್ಗೆ ಮಾತನಾಡುವ ಸಿದ್ದರಾಮಯ್ಯನವರು ಪಾಕಿಸ್ತಾನಕ್ಕೆ ಹೋಗಿ ಜ್ಯಾತ್ಯಾತೀತತೆ ಎಂದು ಹೇಳಲಿ ನೋಡೋಣ ಎಂದರು.

ಪಾಕಿಸ್ತಾನದಲ್ಲೇ ಸಿಯಾ, ಸುನ್ನಿ ಅಂತಾ ಎರಡು ಜಾತಿಗಳಿವೆ. ಎಲ್ಲಿಯತನಕ ಅಲ್ಪಸಂಖ್ಯಾತರ ಅಲ್ಪಸಂಖ್ಯಾತರಾಗಿಯೇ ಇರುತ್ತಾರೋ ಅಲ್ಲಿಯವರೆ ಅವರು ಸುಮ್ಮನಿರುತ್ತಾರೆ. ಬಹುಸಂಖ್ಯಾತರಾದ್ರೆ ಅವರವರೇ ಹೊಡೆದಾಡಿಕೊಳ್ಳುತ್ತಾರೆ. ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಶಾಂತಿಯೇ ಇಲ್ಲ. ಆದರೆ, ಭಾರತದಲ್ಲಿರುವ ಮುಸ್ಲಿಂರಿಗೆ ಒಂದೇ ಮಾತರಂ ಎಂದು ಹೇಳುವ ಪರಿಸ್ಥಿತಿ ಬಂದಿದೆ. ಇಲ್ಲಿರುವ ಮುಸ್ಲಿಂರು ಒಂದೇ ಮಾತರಂ ಎನ್ನಲೇಬೇಕು ಎಂದರು.

ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾದರೆ, ಕುಂದಗೋಳ ತಾಲೂಕಿನ ಯರಗುಪ್ಪಿಯಲ್ಲಿ ಕುರುಬ ಸಮಾಜದ ಮಹಿಳೆ ಮೇಲೆ ಮುಸ್ಲಿಂ ಯವಕನಿಂದ ಲೈಂಗಿಕ ದೌರ್ಜನ್ಯ ನಡೆಯುತ್ತದೆ. ಕಾಂಗ್ರೆಸ್ ಪಕ್ಷ ಇಂತವರಿಗೆ ರಕ್ಷಣೆ ನೀಡುತ್ತದೆ. ಮುಸ್ಲಿಂ ಸಂಘಟನೆಗಳಾದ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಯವರು ಹಿಂದೂ ಕಾರ್ಯಕರ್ತರನ್ನು ಕೊಲ್ಲುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಬೆಂಬಲ ನೀಡುತ್ತಿರುವುದು ಕಾಂಗ್ರೆಸ್ ಪಕ್ಷ ಎಂದರು.

ಮುಸ್ಲಿಂ ಮಹಿಳೆಯರ ಹಿತದೃಷ್ಠಿಯಿಂದ ನಾವು ತ್ರಿವಳಿ ತಲಾಖ್ ರದ್ದು ಮಾಡಿದೆವು. ಇದಕ್ಕೆ ಕಾಂಗ್ರೆಸ್‌ನವರು ವಿರೋಧ ಮಾಡಿದರು. ಈಗಲೂ ವಿರೋಧ ಮಾಡುತ್ತಲೇ ಇದ್ದಾರೆ. ಹಿಜಾಬ್ ವಿಷಯದಲ್ಲೂ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ತುಷ್ಠೀಕರಣದ ರಾಜಕಾರಣವನ್ನು ಕಾಂಗ್ರೆಸ್ ಮಾಡುತ್ತಿದೆ. ಇಂತವರನ್ನು ಶಾಶ್ವತವಾಗಿ ಅಧಿಕಾರದಿಂದ ದೂರವಿಡಬೇಕು ಎಂದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

27/02/2022 09:05 pm

Cinque Terre

147.85 K

Cinque Terre

46

ಸಂಬಂಧಿತ ಸುದ್ದಿ