ಮುಂಡಗೋಡ: ಅದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹನುಮಾಪುರ ಗ್ರಾಮ. ಇದೆ ಗ್ರಾಮದಲ್ಲಿಗ ಬೂದಿ ಮುಚ್ಚಿದ ಕೆಂಡದಂತ ವಾತಾವರಣ ಸೃಷ್ಟಿಯಾಗಿದೆ. ಗ್ರಾಮದಲ್ಲಿ ಆತಂಕದ ವಾತವಾರಣ ಸೃಷ್ಟಿಯಾಗಿದ್ದು, ಪೊಲೀಸರು ಬಿಡುಬಿಟ್ಟಿದ್ದಾರೆ. ಇಂತಹ ಸ್ಥಿತಿಗೆ ಕಾರಣವಾಗಿದ್ದು, ಗ್ರಾಮದಲ್ಲಿರುವ ಕಾಳಿಕಾದೇವಿ ಮಂದಿರ ಹಿರೇಮಠದ ಉತ್ತರಾಧಿಕಾರಿ ವಿವಾದ.
ಹೌದು..ಕಾಳಿಕದೇವಿ ಮಂದಿರಕ್ಕೆ ಯಾರು ಉತ್ತರಾಧಿಕಾರಿ ಎನ್ನುವ ವಿಚಾರ ಭುಗಿಲೆದ್ದಿದೆ. ಸದಾನಂದ ಶಿವಾಚಾರ್ಯ ಸ್ವಾಮಿಗಳು ನಾಲ್ಕು ತಿಂಗಳ ಹಿಂದೆ ಲಿಂಗೈಕ್ಯರಾದ ಬಳಿಕ ಗ್ರಾಮದ ಒಂದು ಸಮಯದಾಯದವರು ಮಂದಿರಕ್ಕೆ ಟ್ರಸ್ಟ್ ಮಾಡಿಕೊಂಡಿದ್ದಾರೆ. ಈ ಟ್ರಸ್ಟ್ ನವರು ಸದಾನಂದ ಶಿವಾಚಾರ್ಯ ಸ್ವಾಮಿಜಿಗಳ ಬಳಿಕ ಸೋಮಶೇಖರ್ ಯಾಳಗಿ ಎನ್ನುವವರನ್ನು ತಾತ್ಕಾಲಿಕವಾಗಿ ಮಂದಿರದಲ್ಲಿ ಪೂಜೆಗೆ ನೇಮಕ ಮಾಡಿದ್ದರು. ಆದರೆ ಈತ ಮಂದಿರಕ್ಕೆ ಸೇರಿದ 24 ಲಕ್ಷ ರೂಪಾಯಿ ಮತ್ತು ಅಪಾರ ಪ್ರಮಾಣದ ಚಿನ್ನ ಬೆಳ್ಳಿ ದೋಚಿಕೊಂಡು ಪರಾರಿಯಾಗಿದ್ದಾನೆ. ಆತನ ವಿರುದ್ದ ಪೊಲೀಸರಿಗೆ ದೂರು ನೀಡಿದ್ದರು ಪ್ರಯೋಜನ ಆಗಿಲ್ಲ. ಹೀಗಾಗೆ ಲಿಂಗೈಕ್ಯ ಶ್ರೀಗಳ ಹಿರಿಯ ಸಹೋದರನ ಪುತ್ರ ವೇದಮೂರ್ತಿ ಗಂಗಾಧರಯ್ಯ ಗುರುಸಿದ್ದಯ್ಯ ಹಿರೇಮಠ ಅವರನ್ನು ಕಾಳಿಕಾದೇವಿ ಮಂದಿರದ ಉತ್ತರಾಧಿಕಾರಿಯನ್ನಾಗಿ ಟ್ರಸ್ಟ್ ಸದಸ್ಯರು ನೇಮಿಸಿ ಧಾರ್ಮಿಕ ವಿಧಿವಿಧಾನಗಳನ್ನ ಮುಗಿಸಿದ್ದಾರೆ.
ಟ್ರಸ್ಟ್ ನವರು ನೇಮಕ ಮಾಡಿದ ಉತ್ತರಾಧಿಕಾರಿಯನ್ನು ಒಪ್ಪಿಕೊಳ್ಳಲು ಮತ್ತೊಂದು ಗುಂಪು ಸಿದ್ದವಾಗಿಲ್ಲ. ಇದು ರಂಭಾಪುರಿ ಮಠದ ಶಾಖಾ ಮಠ ಅಂತಾ ಹೇಳುತ್ತಿರುವ ಇನ್ನೊಂದು ಬಣ, ನಾಳೆ ರಂಭಾಪುರಿ ಶ್ರೀ ಗಳ ನೇತೃತ್ವದಲ್ಲಿ ಮಂದಿರದ ಹಣ, ಚಿನ್ನ ಕದ್ದು ಪರಾರಿಯಾದ ಸೋಮಶೇಖರ್ ಅವರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಲು ಸಿದ್ದತೆ ನಡೆಸಿರೋದು ವಿವಾದಕ್ಕೆ ಕಾರಣವಾಗಿದೆ. ಮಂದಿರದ ಹಣ, ಚಿನ್ನ ಕದ್ದು ಓಡಿ ಹೋದವನನ್ನು ಪೊಲೀಸರು ಬಂದಿಸುತ್ತಿಲ್ಲ, ರಂಭಾಪುರಿ ಮಠಕ್ಕೆ ಸಂಬಂಧವಿಲ್ಲದಿದ್ದರೂ ಇದನ್ನು ಶಾಖಾ ಮಠ ಎಂದು ಹೇಳುತ್ತಿದ್ದಾರೆ. ಇದೆಲ್ಲದರ ಹಿಂದೆ ಮಾಜಿ ಶಾಸಕ ವಿ.ಎಸ್.ಪಾಟೀಲ ಕೈವಾಡವಿದೆ ಎಂದು ಟ್ರಸ್ಟ್ ಸದಸ್ಯರು ಆರೋಪಿಸಿದ್ದಾರೆ. ಲಿಂಗೈಕ್ಯ ಶ್ರೀಗಳ ಹೆಸರಿನಲ್ಲಿರುವ ಕೋಟ್ಯಾಂತರ ರೂಪಾಯಿ ಆಸ್ತಿ ಹೊಡೆಯುವ ಹುನ್ನಾರ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
Kshetra Samachara
09/02/2022 10:46 pm