ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಗ್ರಾ.ಪಂ ಚುನಾವಣೆ; ಶಾಂತಿಯುತ ಮತದಾನ

ನವಲಗುಂದ : ನವಲಗುಂದ ತಾಲೂಕಿನ ಕಾಲವಾಡ ಗ್ರಾಮದಲ್ಲಿ ಮತ್ತು ತಡಹಾಳ ಗ್ರಾಮದಲ್ಲಿ ತೆರವಾದ ಗ್ರಾಮ ಪಂಚಾಯತ್ ಸ್ಥಾನಕ್ಕೆ ಸೋಮವಾರ ಉಪಚುನಾವಣೆಯ ಮತದಾನ ಶಾಂತಿಯುತವಾಗಿ ನಡೆದಿದೆ.

ಇನ್ನು ಕಾಲವಾಡ ಗ್ರಾಮದ ವಾರ್ಡ್ ನಂಬರ್ ಒಂದರಲ್ಲಿ 86.89% ಹಾಗೂ ವಾರ್ಡ್ ಎರಡರಲ್ಲಿ 88.50% ರಷ್ಟು ಮತದಾನವಾಗಿದೆ. ಒಟ್ಟು 10 ಸ್ಥಾನಗಳನ್ನು ಹೊಂದಿರುವ ಕಾಲವಾಡ ಗ್ರಾಮ ಪಂಚಾಯಿತಿಯಲ್ಲಿ ಈ ಮೊದಲೇ ಕರ್ಲವಾಡ ಗ್ರಾಮದ ಮೂರು ಸದಸ್ಯರು ಅವಿರೋಧ ಆಯ್ಕೆ ಯಾದ ಕಾರಣ ಏಳು ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಿತು. ವಾರ್ಡ್ ಒಂದರಲ್ಲಿ ಮೂರು ಸದಸ್ಯರನ್ನು ಆಯ್ಕೆ ಮಾಡಬೇಕಾಗಿದ್ದು, ಅದರಲ್ಲಿ 11 ಅಭ್ಯರ್ಥಿಗಳು ವಾರ್ಡ್ ನಂಬರ್ ಎರಡರಲ್ಲಿ 4 ಸದಸ್ಯರನ್ನು ಆಯ್ಕೆ ಮಾಡಬೇಕಾಗಿತ್ತು ಅದರಲ್ಲಿ 12 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ತಡಹಾಳ ಗ್ರಾಮ ಪಂಚಾಯಿತಿಯ ಅರಹಟ್ಟಿ ಗ್ರಾಮದ ಉಪಚುನಾವಣೆಯ ಒಂದು ಸ್ಥಾನಕ್ಕೆ ಮೂರು ಅಭ್ಯರ್ಥಿಗಳು ಸ್ಪರ್ಧಿಸಿದ್ದು, 73% ರಷ್ಟು ಮತದಾನವಾಗಿದೆ.

Edited By : PublicNext Desk
Kshetra Samachara

Kshetra Samachara

28/12/2021 12:22 pm

Cinque Terre

1.8 K

Cinque Terre

0

ಸಂಬಂಧಿತ ಸುದ್ದಿ