ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಎಲ್ಲಾ ಪಾರ್ಟಿ ನಾಶ ಮಾಡುವ ವ್ಯಕ್ತಿ ಹೊರಟ್ಟಿ: ಚಿಂಚೋರೆ

ಎಲ್ಲ ಪಕ್ಷಗಳನ್ನು ಸರ್ವನಾಶ ಮಾಡುವ ವ್ಯಕ್ತಿ ಬಸವರಾಜ ಹೊರಟ್ಟಿ ಎಂದು ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಹೊರಟ್ಟಿ ಅವರು ಸೆಕ್ಯುಲರ್ ಎಂಬ ಭಾವನೆಯಲ್ಲಿದ್ದೆವು. ಆದರೆ, ಅವರು ಈಗ ಮನುವಾದಿ ಪಾರ್ಟಿ ಸೇರಿದ್ದಾರೆ. ಧಾರವಾಡ ಜಿಲ್ಲೆಯ ಕಾಂಗ್ರೆಸ್ ಪಕ್ಷವನ್ನು ಸತ್ಯಾನಾಶ ಮಾಡಿದವರೇ ಹೊರಟ್ಟಿ ಎಂಬ ಆರೋಪ ಮಾಡಿದರು.

ಸೆಕ್ಯುಲರ್ ಎಂದು ಹೇಳಿ ನಮ್ಮ ಕಡೆ ಇದ್ದವರಿಂದ ಸಹಾಯ ಪಡೆದುಕೊಂಡರು. ಯಾವ ಪಕ್ಷದ ಸಿಎಂ ಇದ್ದರೂ ಇವರಿಗೆ ಕ್ಲೋಸ್. ಕಾಂಗ್ರೆಸ್ ಸೋಲುವಂತ ಅಭ್ಯರ್ಥಿಗೆ ಇವರು ಟಿಕೆಟ್ ಕೊಡಿಸುತ್ತಿದ್ದರು. ಸೆಕ್ಯುಲರ್ ಎಂದು ಹೇಳಿ ಮನುವಾದಿ ಪಾರ್ಟಿಗೆ ಹೋಗುವ ಅವಶ್ಯಕತೆ ಇವರಿಗೇನಿತ್ತು ಎಂದು ಪ್ರಶ್ನಿಸಿದರು.

ಹೊರಟ್ಟಿ ಅವರಿಗೆ 78 ವರ್ಷ ವಯಸ್ಸು. ಎಲ್.ಕೆ.ಅಡ್ವಾನಿ, ಮುರಳಿ ಮನೋಹರ ಜೋಶಿ ಹಾಗೂ ಯಡಿಯೂರಪ್ಪನವರಿಗೆ ನಿವೃತ್ತಿ ನೀಡಿದ ಪಾರ್ಟಿ ಬಿಜೆಪಿ. ಇಂತಹ ಪಾರ್ಟಿಯಲ್ಲಿ ಹೊರಟ್ಟಿ ಗೋಲ್ ಮಾಲ್ ಮಾಡಿ ಹೋಗಿದ್ದಾರೆ. ಗಿನ್ನಿಸ್ ದಾಖಲೆ ಮಾಡುವ ಸಂಬಂಧ ಟೀಚರ್ ಹಿತಾಸಕ್ತಿ ತುಳಿದು ಸೆಕ್ಯುಲರ್ ಗೌನ್ ಕೆಳಗಿಳಿಸಿ ಬಿಜೆಪಿ ಗೌನ್ ಹಾಕಿಕೊಂಡಿದ್ದಾರೆ ಎಂದರು.

ಎಲ್ಲಾ ಪಾರ್ಟಿ ಸತ್ಯಾನಾಶ ಮಾಡುವ ವ್ಯಕ್ತಿ ಹೊರಟ್ಟಿ. ಬಿಜೆಪಿಯನ್ನೂ ಹಾಗೇ ಮಾಡುತ್ತಾರೆ. ಆರ್‌ಎಸ್‌ಎಸ್ ಕೇಶವ ಕುಂಜದವರು ಹೊರಟ್ಟಿ ಅವರಿಗೆ 78 ವರ್ಷ ವಯಸ್ಸಾದರೂ ಟಿಕೆಟ್ ಹೇಗೆ ಕೊಟ್ಟರು? ಸೋಲಿನ ಭೀತಿಯಲ್ಲಿ ಹೊರಟ್ಟಿ ಬಿಜೆಪಿ ಸೇರಿದ್ದಾರೆ. ಈ ಪಕ್ಷಕ್ಕೂ ಯಾವಾಗ ಕೈಕೊಡುತ್ತಾರೋ ಗೊತ್ತಿಲ್ಲ. ನಾಳೆ ಕಾಂಗ್ರೆಸ್ ಗೆದ್ದ ಮೇಲೆ ಕಾಂಗ್ರೆಸ್‌ಗೆ ಬರುತ್ತಾರೆ. ಶಿಕ್ಷಕರಿಗೆ ಇವರ ಕೊಡುಗೆ ಬಹಳಷ್ಟಿದೆ ಎಂದು ಸುಳ್ಳು ಬಿಂಬಿಸುತ್ತಾರೆ ಎಂದರು.

ಇವರು 8 ಬಾರಿ ಸರ್ಕಾರಿ ಮನೆ ಕೊಡಬೇಕು ಎಂದು ಲೆಟರ್ ಹಾಕಿದ್ದಾರೆ. ಟೀಚರ್ಸ್ ಸಲುವಾಗಿ ಒಂದೂ ಲೆಟರ್ ಬರೆದಿಲ್ಲ. ಬ್ರಾಹ್ಮಣ ವಿರೋಧಿ ಹೊರಟ್ಟಿ. ಇಂದು ಅದೇ ಪಾರ್ಟಿ ಸೇರಿದ್ದಾರೆ. ಲಿಂಗಾಯತ ಧರ್ಮ ಸ್ಥಾಪನೆಗೆ ಇವರು ಮುಂಚೂಣಿಯಲ್ಲಿದ್ದರು. ಕ್ರಿಶ್ಚಿಯನ್ ಇನ್ಸಿಟ್ಯೂಟ್, ಮುಸ್ಲಿಂ ಇನ್ಸಿಟ್ಯೂಟ್ ಹಾಗೂ ಸೆಕ್ಯುಲರ್ ಮತದಾರರು ವಿಚಾರ ಮಾಡಿ ಮತ ಹಾಕಬೇಕು. ಹೊರಟ್ಟಿ ಅವರಿಗೆ 78 ವರ್ಷ ವಯಸ್ಸು ಈ ವರ್ಷ ಶಿಕ್ಷಕರೇ ಅವರಿಗೆ ನಿವೃತ್ತಿ ನೀಡುತ್ತಾರೆ ಎಂದರು.

Edited By :
Kshetra Samachara

Kshetra Samachara

30/05/2022 03:14 pm

Cinque Terre

18.51 K

Cinque Terre

8

ಸಂಬಂಧಿತ ಸುದ್ದಿ