ಪ್ರವಾದಿ ಮುಹಮ್ಮದ್ ಅವರ ಕುರಿತು ನಮ್ಮ ಪಕ್ಷದ ಮಾಜಿ ವಕ್ತಾರೆ ನೂಪುರ್ ಶರ್ಮಾ ನೀಡಿರುವ ಹೇಳಿಕೆ ಕುರಿತು ನಮ್ಮ ಪಕ್ಷ ಸ್ಪಷ್ಟವಾದ ನಿಲುವು ಕೈಗೊಂಡಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಇದೇ ಸಂದರ್ಭವನ್ನು ಬಳಕೆ ಮಾಡಿಕೊಂಡು ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದರು.
ಕೆಲವು ಸಂಘಟನೆಗಳು ಕೂಡ ಈ ಘಟನೆಗೆ ಕೋಮು ಸ್ಪರ್ಶ ನೀಡುತ್ತಿವೆ. ಈ ರೀತಿಯ ಕೆಲಸ ಮಾಡಬಾರದು. ಎಲ್ಲರೂ ಶಾಂತಿ- ಸೌಹಾರ್ದತೆಯಿಂದ ಕೂಡಿ ಬಾಳಲು ನಮ್ಮ ಸರ್ಕಾರ ಈಗಲೂ ಬದ್ಧವಿದೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/06/2022 02:17 pm