ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಿಮ್ಮ ಕಡೆ 'ರಾಜಾಹುಲಿ' ಇದ್ರೆ ನಮ್ಮ ಕಡೆ ಹೆಬ್ಬುಲಿ ಇದೆ; ಮಾಜಿ ಶಾಸಕ ಕಾಶಪ್ಪನವರ

ಧಾರವಾಡ ಜಿಲ್ಲೆಯಲ್ಲಿ ಪಂಚಮಸಾಲಿ ಸಮುದಾಯ ದೊಡ್ಡದಿದೆ. ನಾವು ಬಹುಸಂಖ್ಯಾತರು, ಆದರೆ ಇಲ್ಲಿ ಅಲ್ಪಸಂಖ್ಯಾತರು ಆಗಿದ್ದೇವೆ.

ಸಿಎಂ ಬೊಮ್ಮಾಯಿ‌ಯವರೇ ಇದೇ ಕೊನೆ ಹಂತ. ಆಗಷ್ಟ್ 22ರೊಳಗೆ ನಮಗೆ ಮೀಸಲಾತಿ ನೀಡಿ. ಮೀಸಲಾತಿ ಕೊಡದೆ ಇದ್ದರೆ ನಿಮ್ಮನ್ನ ಮನೆಗೆ ‌ಕಳಿಸುತ್ತೇವೆ. ಅಷ್ಟೇ ಅಲ್ಲದೆ ಎಂತಹ ರಾಜಾಹುಲಿಗಳ ಬಂದರೂ ನಾವು ನೋಡಿಕೊಳ್ಳುತ್ತೇವೆ. ನಮ್ಮ‌ ಕಡೆ ಒಂದು ಬಸವರಾಜ ಪಾಟೀಲ್ ಯತ್ನಾಳ ಎನ್ನುವ ಹೆಬ್ಬೂಲಿ ಇದೆ ಎಂದು ಮಾಜಿ ಶಾಸಕ‌ ವಿಜಯಾನಂದ ಕಾಶಪ್ಪನವರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ನಗರದಲ್ಲಿ ಪಂಚಮಸಾಲಿ ಸಭೆಯಲ್ಲಿ ಮಾತನಾಡಿದ ಅವರು, ಕೊಟ್ಟ ಮಾತು ತಪ್ಪಿದ ಕಾರಣಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ನಮ್ಮ ಸಮಾಜದ ಶಾಪ ತಟ್ಟಿದೆ. ನಾವು ಬಹು ಸಂಖ್ಯಾತರು, ಕೊಟ್ಟ ಮಾತನ್ನ ಸಿಎಂ ಬಸವರಾಜ ಬೊಮ್ಮಾಯಿ ತಪ್ಪಬಾರದು. ಮಾತು ತಪ್ಪಿದ್ರೆ ನಮ್ಮ ಶಾಪ ನಿಮಗೆ ಮುಂದಿನ ದಿನಗಳಲ್ಲಿ ತಟ್ಟುತ್ತದೆ ಎಂದು ಎಚ್ಚರಿಕೆ ನೀಡಿದರು.

Edited By :
Kshetra Samachara

Kshetra Samachara

30/07/2022 07:45 pm

Cinque Terre

29.79 K

Cinque Terre

6

ಸಂಬಂಧಿತ ಸುದ್ದಿ