ಧಾರವಾಡ: ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಧಾರವಾಡ ಜಿಲ್ಲೆಯ ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಿನಾದ್ಯಂತ ಭಾರೀ ಪ್ರಮಾಣದ ಬೆಳೆ ಹಾನಿಯಾಗಿದೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.84.8 ರಷ್ಟು ಹೆಚ್ಚಿನ ಮಳೆಯಾಗಿದೆ. 3 ವ್ಯಕ್ತಿಗಳ ಜೀವಹಾನಿಯಾಗಿದೆ. ಗಂಜಿ ಕೇಂದ್ರ ತೆರೆದು ಜಿಲ್ಲಾಡಳಿತ ಸಹಾಯ ಮಾಡಿದೆ. 601 ಮನೆಗಳಿಗೆ ಹಾನಿಯುಂಟಾಗಿದೆ. ಈಗಾಗಲೇ 1172 ಮನೆಗಳನ್ನು ಗುರುತು ಮಾಡಲಾಗಿದೆ ಎಂದರು.
46 ಸಾವಿರ ಹೆಕ್ಟೇರ್‌ನಲ್ಲಿನ ಬೆಳೆ ನಾಶವಾಗಿದೆ. 35 ಕಿಲೋ ಮೀಟರ್ ರಸ್ತೆ ಹಾಳಾಗಿದೆ. 8 ಬ್ರಿಡ್ಜ್‌ಗಳು ಹಾಳಾಗಿವೆ. 140 ಅಂಗನವಾಡಿ ಕೇಂದ್ರ, 432 ಶಾಲೆಗಳು ಹಾಳಾಗಿವೆ. ಎಸ್‌ಡಿಆರ್‌ಎಫ್ ತಂಡ ಹುಬ್ಬಳ್ಳಿಯಲ್ಲೇ ಬೀಡು ಬಿಟ್ಟಿದೆ. ಜನರಿಗೆ ಯಾವುದೇ ತೊಂದರೆ ಆಗಲಾರದಂತೆ ಎಚ್ಚರವಹಿಸಲಾಗಿದೆ. ಎಲ್ಲಾ ಅಧಿಕಾರಿಗಳು ಸಹ ತಾಲೂಕಾ ಕೇಂದ್ರದಲ್ಲೇ ಇರಲು ಸೂಚಿಸಲಾಗಿದೆ ಎಂದರು.
Kshetra Samachara
11/09/2022 10:34 am