ನವಲಗುಂದ: ಸುರಿದ ಮಳೆಗೆ ನವಲಗುಂದ ಭಾಗದ ಬಹುತೇಕ ಜಮೀನುಗಳ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಈ ಹಿನ್ನೆಲೆ ಮಾಜಿ ಶಾಸಕ ಎನ್.ಹೆಚ್.ಕೋನರಡ್ಡಿ ಅವರು ರೈತರ ಜಮೀನುಗಳಿಗೆ ಭೇಟಿ ನೀಡಿ, ಪರಿಹಾರಕ್ಕೆ ಆಗ್ರಹಿಸಿದರು.
ತಾಲ್ಲೂಕಿನ ತಡಹಾಳ, ಅರಹಟ್ಟಿ, ಸೊಟಕನಾಳ, ಕಡದಳ್ಳಿ, ನಾಗನೂರ, ಗುಡಿಸಾಗರ ಗ್ರಾಮಗಳಿಗೆ ಭೇಟಿ ನೀಡಿ ಹಾನಿಯಾದ ಉಳ್ಳಾಗಡ್ಡಿ, ಕಡಲೆ, ಗೋವಿನಜೋಳ, ಕುಸುಬೆ ಬೆಳೆಗಳನ್ನು ವೀಕ್ಷಿಸಿದ ಕೋನರಡ್ಡಿ ಅವರು ರೈತರಿಗೆ ಪರಿಹಾರ ನೀಡುವುದರ ಜೊತೆಗೆ ರಸ್ತೆಗಳನ್ನು ದುರಸ್ತಿಗೊಳಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ರಾಜು ಸಂಕರಡ್ಡಿ, ಸತೀಶ ಮಮಟಗೇರಿ, ನಿಂಗಪ್ಪ ಮರಿನಾಯ್ಕರ, ಅಶೋಕ ಕರಮಳ್ಳಿ, ದೇವರಾಜ ಜಲಾದಿ ಮುಂತಾದರು ಉಪಸ್ಥಿತರಿದ್ದರು.
Kshetra Samachara
24/11/2021 11:08 am