ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸುಳ್ಳು ದೂರು ಕೊಟ್ಟವರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸುವೆ; ಸೂರಜ್

ಧಾರವಾಡ: ನಿನ್ನೆ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ನಾನು ಭಾಗಿಯಾಗಿರಲೇ ಇಲ್ಲ. ಆದರೂ ನನ್ನ ಮೇಲೆ ದೂರು ದಾಖಲಿಸಿದ್ದಾರೆ. ನಾನು ನಿನ್ನೆ ಧಾರವಾಡದಲ್ಲಿ ಇರಲೇ ಇಲ್ಲ. ಗೋವನಕೊಪ್ಪದಲ್ಲಿದ್ದೆ. ಆದರೂ ನನ್ನ ಮೇಲೆ ದೂರು ದಾಖಲಿಸಿದ್ದು ಏಕೆ ಎಂದು ಸೂರಜ್ ಪುಡಕಲಕಟ್ಟಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ನಿಂದ ನಿನ್ನೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಈ ವೇಳೆ ವೀರ ಸಾವರ್ಕರ್ ಅವರ ಫೋಟೋ ಕೂಡ ದಹನ ಮಾಡಲಾಯಿತು. ಆದರೆ, ಈ ಪ್ರತಿಭಟನೆಯಲ್ಲಿ ನಾನು ಭಾಗಿಯಾಗಿರಲೇ ಇಲ್ಲ. ನಾನು ಧಾರವಾಡದಲ್ಲಿ ಇರಲೇ ಇಲ್ಲ. ಈ ಬಗ್ಗೆ ಯಾವುದೇ ತನಿಖೆ ನಡೆಸಿದರೂ ನಾನು ತನಿಖೆಗೆ ಸಿದ್ಧ. ನನ್ನ ಮೇಲೆ ಸುಳ್ಳು ದೂರು ಕೊಟ್ಟವರ ಮೇಲೆ ನಾನೂ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಸೂರಜ್ ಪುಡಕಲಕಟ್ಟಿ ಸ್ಪಷ್ಟಪಡಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

20/08/2022 10:56 pm

Cinque Terre

33.59 K

Cinque Terre

0

ಸಂಬಂಧಿತ ಸುದ್ದಿ