ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಕಾಂಗ್ರೆಸ್ಸಿಗರ ಗಮನಕ್ಕೆ ತರದೆ ಭೂಮಿಪೂಜೆ, ಪ್ರತಿಭಟನೆ ಎಚ್ಚರಿಕೆ

ಕುಂದಗೋಳ: ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಸ್ಥಳೀಯ ಪಟ್ಟಣ ಪಂಚಾಯತಿ ಕಾಂಗ್ರೆಸ್‌ ಸದಸ್ಯರ ಹಾಗೂ ಸ್ಥಳೀಯ ಶಾಸಕರ ಗಮನಕ್ಕೆ ತರದೆ ಬಿಜೆಪಿ ಮುಖಂಡರು ಭೂಮಿಪೂಜೆ ಕೈಗೊಂಡು ಕಾಂಗ್ರೆಸ್ ಶಾಸಕರಿಗೆ ಕಾಂಗ್ರೆಸ್‌ ಸದಸ್ಯರಿಗೆ ಅಗೌರವ ತೋರಿಸಿದ್ದಾರೆ ಎಂದು ಪ.ಪಂ ಸದಸ್ಯ ಬಸವರಾಜ ತಳವಾರ ಆರೋಪ ಮಾಡಿದ್ದಾರೆ.

ಹೌದು ! ಕುಂದಗೋಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡದ ಬಳಿ ಒಂದು ಕೋಟಿ ರೂ. ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.

ಕಳೆದ ಬುಧವಾರ ಅಂಬೇಡ್ಕರ್ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನಡೆದರೂ ಇಲ್ಲಿನ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಕಾಂಗ್ರೆಸ್ ಸದಸ್ಯರಿಗೆ ತಿಳಿಸಿಲ್ಲ. ಸ್ಥಳೀಯ ಅಧಿಕಾರಿಗಳು ಬಿಜೆಪಿಯ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಅತಿಕ್ರಮಣ ತೆರವು ಪೂರ್ಣ ಮಾಡದೆ ಏಕಾಏಕಿ ವಿವಿಧ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಅತಿಕ್ರಮಣ ತೆರವು ಪೂರ್ತಿ ಆಗುವವರೆಗೂ ನೂತನ ಕಾಮಗಾರಿಗೆ ಅವಕಾಶ ನೀಡಬಾರದು, ಒಂದು ವೇಳೆ ನೀಡಿದರೆ ಪ್ರತಿಭಟನೆ ಮಾಡುವುದಾಗಿ ಕಾಂಗ್ರೆಸ್ ಸದಸ್ಯರು ಎಚ್ಚರಿಕೆ ನೀಡಿ ಶಾಸಕರು ಇಲ್ಲದ ಸಂದರ್ಭದಲ್ಲೇ ಭೂಮಿ ಪೂಜೆ ಮಾಡುತ್ತಾರೆ ಎಂದರು.

ಈ ವೇಳೆ ಪ.ಪಂ ಸದಸ್ಯೆ ಗಂಗಮ್ಮ ಬಂಡಿವಾಡ ಹಾಗೂ ಕಮಲಾಕ್ಷಿ ಕಾಲವಾಡ, ಸರತಾಜ ಬೇಗಂ, ಹನುಮವ್ವ ಕೋರಿ, ಉಪಸ್ಥಿತರಿದ್ದರು.

Edited By : Somashekar
Kshetra Samachara

Kshetra Samachara

24/06/2022 03:35 pm

Cinque Terre

19.79 K

Cinque Terre

0

ಸಂಬಂಧಿತ ಸುದ್ದಿ