ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮೀಸಲಾತಿ ಮತದಾರರ ಪಟ್ಟಿಯಲ್ಲಿ ಗೊಂದಲ: ಮತದಾನ ಬಹಿಷ್ಕಾರ

ಹುಬ್ಬಳ್ಳಿ:ಮತದಾರರ ಪಟ್ಟಿಯಲ್ಲಿನ ಗೊಂದಲದಿಂದಾಗಿ ಮತದಾನವನ್ನು ನಿಲ್ಲಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿ ತಾಲ್ಲೂಕಿನ ಕಟ್ನೂರ ಗ್ರಾಮದಲ್ಲಿ ಈ ಒಂದು ಘಟನ ನಡೆದಿದೆ.ಮುಖ್ಯವಾಗಿ ಗ್ರಾಮದಲ್ಲಿನ ವಾರ್ಡ್ ಗಳಲ್ಲಿನ ಅಭ್ಯರ್ಥಿಗಳ ಮೀಸಲಾತಿಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಮಾಡಿದ ಎಡವಟ್ಟು ಮತ್ತು ಮತದಾರರ ಪಟ್ಟಿಯಲ್ಲಿನ ಹೇರಾಪೇರಿ ಹೀಗೆ ಸಾಕಷ್ಟು ಪ್ರಮಾಣದಲ್ಲಿ ತೊಂದರೆಯಾಗಿದೆ.

ಹೀಗಾಗಿ ಇದನ್ನು ಅರಿತ ಗ್ರಾಮಸ್ಥರು ಮತದಾನವನ್ನು ಮಾಡದೇ ಬರಿಷ್ಕಾರ ಮಾಡಿದ್ದಾರೆ . ಬೆಳಿಗ್ಗೆಯಿಂದಲೇ ಮತದಾನ ಆರಂಭಗೊಂಡರು ಗ್ರಾಮದಲ್ಲಿ ಮತದಾನವನ್ನು ಸ್ಥಗಿತ ಮಾಡಿದ ಗ್ರಾಮಸ್ಥರು ಇಲಾಖೆಯ ಅಧಿಕಾರಿಗಳ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಕಟ್ನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.ವಾರ್ಡ್ ಗೊಂದಲವಾದ ಹಿನ್ನೆಲೆಯಲ್ಲಿ ಮತದಾನವನ್ನು ಸಂಪೂರ್ಣವಾಗಿ ಸ್ಥಗಿತ ಮಾಡಿರುವ ಗ್ರಾಮಸ್ಥರು ಮತದಾನವನ್ನು ಮುಂದೂಡುವಂತೆ ಪಟ್ಟು ಹಿಡಿದಿದ್ದಾರೆ.

ಇನ್ನೂ ವಿಷಯ ತಿಳಿದ ಹುಬ್ಬಳ್ಳಿ ತಾಲೂಕಿನ ತಹಶೀಲ್ದಾರ ಪ್ರಕಾಶ ನಾಶಿ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ಮಾಡ್ತಾ ಇದ್ದಾರೆ.ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಕ್ಕೇ ಮತ್ತು ಮೀಸಲಾತಿಯಲ್ಲಿ ಎಡವಟ್ಟಾಗಿದ್ದಕ್ಕೇ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದು ವಾರ್ಡ್ ಗಳಲ್ಲಿ ಅದಲು ಬದಲಾದ ಮರದಾರರ ಪಟ್ಟಿಯಿಂದಾಗಿ ಈ ಒಂದು ಸಮಸ್ಯೆಯಾಗಿದೆ.

ಸ್ಥಳದಲ್ಲಿ ಗೊಂದಲದ ವಾತಾವರಣ ಕಂಡು ಬರುತ್ತಿದ್ದು ಜನರನ್ನ ಸಮಾಧಾನ ಪಡಿಸುತ್ತಿರುವ ತಹಸೀಲ್ದಾರ ಹಾಗೂ ಚುನಾವಣಾಧಿಕಾರಿಗಳ ಮಾತನ್ನು ಯಾರು ಕೇಳುತ್ತಿಲ್ಲ.

ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಾಲಚಂದ್ರ ಸಂಕನ್ನವರ,ಲಕ್ಷ್ಮೀ ಸಂಕನ್ನವರ,ರಫೀಕ್ ಸಾಬ್ ಅರಳಿಕಟ್ಟಿ,ಮುಸ್ತಾಕ್ ಹೊಸಮನಿ,ಮಂಜುನಾಥ ದೊಡಮನಿ ಸೇರಿದಂತೆ ಹಲವರು ಸಮಸ್ಯೆ ಸರಿ ಪಡಿಸುವಂತೆ ಒತ್ತಾಯಿಸುತ್ತಿದ್ದಾರೆ.

ಮತದಾನ ಮಾಡಲು ಗ್ರಾಮಸ್ಥರು ಒಪ್ಪುತ್ತಿಲ್ಲ. ಸಧ್ಯವಂತೂ ಮತದಾನ ಸ್ಥಗಿತಗೊಂಡಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Edited By : Manjunath H D
Kshetra Samachara

Kshetra Samachara

27/12/2020 10:35 am

Cinque Terre

41.49 K

Cinque Terre

1

ಸಂಬಂಧಿತ ಸುದ್ದಿ