ಅಣ್ಣಿಗೇರಿ : ತಾಲ್ಲೂಕಿನಲ್ಲಿ ಭಾನುವಾರ ನಡೆಯಲಿರುವ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ತಾಲ್ಲೂಕಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ತಾಲ್ಲೂಕು ಚುನಾವಣಾಧಿಕಾರಿ ಹಾಗೂ ತಹಶಿಲ್ದಾರ ಕೊಟ್ರೇಶ್ವರ ಗಾಳಿ ತಿಳಿಸಿದರು.ತಾಲ್ಲೂಕಿನ 8 ಗ್ರಾಮ ಪಂಚಾಯಿತಿಗಳ 35 ಕ್ಷೇತ್ರಗಳ 109 ಸ್ಥಾನಗಳಿಗೆ ಭಾನುವಾರ ಚುನಾವಣೆ ಜರುಗಲಿದೆ. ಚುನಾವಣೆ ಕರ್ತವ್ಯಕ್ಕಾಗಿ ಒಟ್ಟು 200ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.
ಮುಂಜಾಗ್ರತಾ ಕ್ರಮವಾಗಿ 100ಕ್ಕೂ ಹೆಚ್ಚು ಪೊಲಿಸ್ ಸಿಬ್ಬಂದಿಯನ್ನು ಕೂಡಾ ನೇಮಿಸಲಾಗಿದೆ. ತಾಲ್ಲೂಕಾ ಕೇಂದ್ರದಿಂದ ಆಯಾ ಮತಗಟ್ಟೆಗಳಿಗೆ ತೆರಳಲು 8 ಬಸ್ ವ್ಯವಸ್ಥೆ ಮಾಡಲಾಗಿದೆ. ಮತ ಪೆಟ್ಟಿಗೆಯನ್ನು ಸ್ಥಳೀಯ ಎಪಿಎಂಸಿ ಆವರಣದಿಂದ ಮತಗಟ್ಟೆ ಅಧಿಕಾರಿಗಳ ಜೊತೆ ಬಸ್ ಮೂಲಕ ಆಯಾ ಗ್ರಾಮಗಳಿಗೆ ತಲುಪಿಸಲಾಯಿತು ಎಂದು ಚುನಾವಣಾಧಿಕಾರಿ ಕೊಟ್ರೇಶ್ವರ ಗಾಳಿ ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದರು.
Kshetra Samachara
26/12/2020 04:51 pm