ಹುಬ್ಬಳ್ಳಿ: ರಾಜ್ಯದಲ್ಲಿ ಎದ್ದಿರುವ ಧರ್ಮದ ದಂಗಲ್ ಕಿಡಿ ತಣ್ಣಗಾಗುತ್ತಿರುವ ಹೊತ್ತಿನಲ್ಲಿ ಈಗ ಮತ್ತೊಂದು ವಿವಾದ ಹುಟ್ಟಿಕೊಂಡಿದೆ. ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹುಬ್ಬಳ್ಳಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಇದರ ಜೊತೆಗೆ ಸುಪ್ರಭಾತ ಅಭಿಯಾನ ಮುಂದುವರಿದ ಭಾಗವಾಗಿ, ಎರಡನೇ ಹಂತದ ಹೋರಾಟಕ್ಕೂ ಸಹ ಪ್ಲಾನ್ ಸಿದ್ಧವಾಗಿದೆ. ಈ ಬೆಳವಣಿಗೆಗಳು ಸರ್ಕಾರಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದರೆ, ಮುತಾಲಿಕ್ ಪ್ರಚೋದನಕಾರಿ ಹೇಳಿಕೆ, ಆರುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಮುತಾಲಿಕ್ ಅವರು ಮಸೀದಿ ಮೇಲಿನ ಮೈಕ್ ತೆರವು ಮತ್ತು ಅಜಾನ್ ವಿರುದ್ಧ ಸುಪ್ರಭಾತ ಅಭಿಯಾನ ಆರಂಭ ಮಾಡಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಸರ್ಕಾರ ಎಲ್ಲಾ ಮಸೀದಿ, ಮಂದಿರ, ಚರ್ಚ್ ಗಳಲ್ಲಿ ಅಳವಡಿಸಿರುವ ಮೈಕ್‌ಗಳ ಅಕ್ರಮ ಸಕ್ರಮಕ್ಕೆ 15 ದಿನ ಗಡುವು ನೀಡಿತ್ತು. ಆದರೆ ಸರ್ಕಾರದ ಈ ಆದೇಶಕ್ಕೆ ಯಾವುದೇ ಬೆಲೆ ಸಿಕ್ಕಿಲ್ಲ, ಸರ್ಕಾರ ಕೇವಲ ನೋಟೀಸ್ ನೀಡಿ ಸುಮ್ಮನಾಗಿದೆ. ಆದರೆ ರಾಜ್ಯದಲ್ಲಿ ಯಾರು ಯಾವುದೇ ಕಾನೂನು ಪಾಲನೆ ಮಾಡುತ್ತಿಲ್ಲ. ಸುಪ್ರೀಂ ಕೋರ್ಟ್ ಆದೇಶಕ್ಕೂ ಸಹ ಕಿಮ್ಮತ್ತಿಲ್ಲವೆಂದು ಶ್ರೀರಾಮಸೇನೆ ಮತ್ತೆ ಆಕ್ರೋಶಗೊಂಡಿದೆ.
ಇನ್ನೂ ಮುತಾಲಿಕ್ ಈ ಹೇಳಿಕೆ ನೀಡುತ್ತಿದ್ದಂತೆ ಈ ಹೇಳಿಕೆ ಪರ ಮತ್ತು ವಿರೋಧ ವ್ಯಕ್ತವಾಗುತ್ತಿದೆ. ಹಿಂದೂಪರ ಮುಖಂಡರು ಮತ್ತು ಸಂಘಟನೆಗಳು ಮುತಾಲಿಕ್ ಮಾತಿಗೆ ಧ್ವನಿಗೂಡಿಸಿದರೇ, ಮತ್ತೊಂದು ಕಡೆ ಮುಸ್ಲಿಂ ಮುಖಂಡರು ತೀವ್ರವಾಗಿ ವಿರೋಧ ಹೊರಹಾಕುತ್ತಿದ್ದಾರೆ.
ಒಟ್ಟಿನಲ್ಲಿ ಇಷ್ಟು ದಿನ ಶಾಂತವಾಗಿದ್ದ ಧರ್ಮ ದಂಗಲ್ ಈಗ ಮತ್ತೆ ಹೊತ್ತಿಕೊಂಡಿದೆ. ಒಂದು ಕಡೆ ಸರ್ಕಾರಕ್ಕೆ ಇರಿಸು ಮುರಿಸು ತಂದಿದ್ದರೇ, ಮತ್ತೊಂದು ಕಡೆ ಮುಸ್ಲಿಂ ಸಮುದಾಯದ ಕಣ್ಣು ಕೆಂಪಗಾಗುವಂತೆ ಮಾಡಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/06/2022 08:04 am