ಹುಬ್ಬಳ್ಳಿ: ಅದು ದೇಶದಲ್ಲಿಯೇ ಕುಡಿಯುವ ನೀರಿಗಾಗಿ ನಡೆದ ಸುದೀರ್ಘ ಹೋರಾಟ. ಈ ಹೋರಾಟ ಮಾಡಿದ ಹೋರಾಟಗಾರರಿಗೆ ಸಿಕ್ಕಿದ್ದು ಲಾಟಿಯ ಏಟು ಮತ್ತು ಬೂಟಿನ ಏಟು ಮಾತ್ರ. ಇದರಿಂದಾಗಿ ಹೋರಾಟಗಾರರು ರೋಸಿ ಹೋಗಿ, ಮತ್ತೊಂದು ಸುತ್ತಿನ ಸಮರ ಸಾರಲು ಸಿದ್ಧರಾಗಿದ್ದಾರೆ. ವಿಭಿನ್ನವಾದ ಹೋರಾಟ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಲು ರೆಡಿಯಾಗಿದ್ದಾರೆ..
ಹೌದು….ಮಹದಾಯಿ ನೀರಿನ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಬೇಸತ್ತಿರುವ ರೈತರು, ರೈತ ಹುತ್ಮಾತ್ಮ ದಿನ ಅಂದರೆ ಜುಲೈ 21 ರಿಂದ ಸಾಲ ಮರುಪಾವತಿ ಬಾಯ್ಕಟ್ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಈ ಅಭಿಯಾನಕ್ಕೆ ಮಹದಾಯಿ ಹೋರಾಟ ಸಂಸ್ಥಾಪಕ ವಿಜಯ ಕುಲಕರ್ಣಿ ಕರೆ ನೀಡಿದ್ದಾರೆ. ವಿವಿಧ ಸಂಘಟನೆಗಳು ಮತ್ತು ರೈತರಿಂದ ಬೆಂಬಲ ವ್ಯಕ್ತವಾಗಿದೆ. ಮಹದಾಯಿ ಯೋಜನೆ ಜಾರಿಯಾಗದಿದ್ರೆ ಬ್ಯಾಂಕ್ ನಲ್ಲಿ ಮಾಡಿರುವ ಬೆಳೆ ಸಾಲ,ನೀರಾವರಿ ಸಾಲ ಸೇರಿದಂತೆ ವಿವಿಧ ಮಾದರಿಯ ಸಾಲಗಳನ್ನು ತುಂಬದಿರಲು ನಿರ್ಧಾರ ಮಾಡಿದ್ದಾರೆ..
ರಾಜ್ಯ ಸರ್ಕಾರ ಬಜೆಟ್ ನಲ್ಲಿ ಹಣವಿಟ್ಟು ನಾಟಕ ಆಡುತ್ತಿದೆ. ಆದ್ರೆ ಡಿಪಿಆರ್ ಮಾಡಿಸೋಕೆ ಆಗ್ತಿಲ್ಲ. ಎಲ್ಲ ರಾಜಕೀಯ ಪಕ್ಷಗಳು ಇದನ್ನ ರಾಜಕೀಯ ದಾಳ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ರಕ್ತದಲ್ಲಿ ಪತ್ರ ಬರೆದು ಹೋರಾಟ ಮಾಡಿದವರು. ಅಷ್ಟೇ ಅಲ್ಲದೇ ಪಾದಾಯತ್ರೆ ಮಾಡಿ ಆಗಿನ ಸರ್ಕಾರಗಳ ವಿರುದ್ಧ ಪ್ರತಿಭಟನೆ ಮಾಡಿದವರು. ಇವಾಗ ಇವರೇ ರಾಜ್ಯದ ಮುಖ್ಯಮಂತ್ರಿಗಳಾದ್ರೂ ಯೋಜನೆ ಜಾರಿ ಮಾಡ್ತಿಲ್ಲ, ಕಾಮಗಾರಿ ಆರಂಭ ಮಾಡ್ತಿಲ್ಲ. ಇದಕ್ಕಾಗಿ ಮಹದಾಯಿ ಮಕ್ಕಳು ರೈತರಿಗೆ ಕರೆ ಕಟ್ಟಿದ್ದಾರೆ. ನಮಗೆ ನೀರೆ ನೀಡಲ್ಲ ಅಂದ್ರೆ ಸಾಲ ತುಂಬೋದು ಹೇಗೆ. ಅದಕ್ಕಾಗಿಯೇ ನಾವು ಸಾಲ ತುಂಬುವುದಿಲ್ಲ. ಸರ್ಕಾರ ಏನಾದ್ರು ಮಾಡಿಕೊಳ್ಳಲಿ ಅಂತ ರೈತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ..
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/07/2022 03:05 pm