ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶಿಕ್ಷಕರ ಕ್ಷೇತ್ರದ ಚುನಾವಣೆ ಬಹಿಷ್ಕಾರಕ್ಕೆ ಮುಂದಾದ ಶಿಕ್ಷಕರು

ಪಬ್ಲಿಕ್ ನೆಕ್ಸ್ಟ್ ವಿಶೇಷ-

ಈರಣ್ಣ ವಾಲಿಕಾರ

ಹುಬ್ಬಳ್ಳಿ: ಅವರೆಲ್ಲ ಅದೆಷ್ಟೋ ಮಕ್ಕಳಿಗೆ ದಾರಿ ದೀಪವಾದವರು, ಇವರಿಂದ ದೇಶ ಸಮಾಜಮುಖಿಯತ್ತ ಸಾಗುತ್ತಿದೆ. ಆದ್ರೆ ಸರ್ಕಾರ ಮಾತ್ರ ಇವರಿಗೆ ಮೋಸ ಮಾಡುತ್ತಿದೆ. ಅನುದಾನರಹಿತ ಶಾಲಾ ಶಿಕ್ಷಕರಿಗೆ ಸರಕಾರದಿಂದ ವೇತನ ಸಿಗಬೇಕು. ನಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲವಾದರೆ ಮುಂಬರುವ ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರದ ಚುನಾವಣೆ ಅಷ್ಟು ಸುಲಭವಾಗಿ ನಡೆಯೋದಿಲ್ಲ ಎಂಬ ಎಚ್ಚರಿಕೆ ಕೊಟ್ಟಿದ್ದಾರೆ.

ಜೂನ್ ತಿಂಗಳಲ್ಲಿ ಶಿಕ್ಷಕ ಮತ್ತು ಪದವೀಧರರ ಚುನಾವಣೆ ಬರಲಿದೆ. ಈಗಾಗಲೇ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ ಶಿಕ್ಷಕರ ಕ್ಷೇತ್ರಕ್ಕೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಆದರೆ ಇತ್ತ ಅನುದಾನರಹಿತ ಶಿಕ್ಷಕರು ಮುಂಬರುವ ಶಿಕ್ಷಕರ ಮತ್ತು ಪದವೀಧರರ ಚುನಾವಣೆಯನ್ನು ಬಹಿಷ್ಕಾರ ಹಾಕಲು ಮುಂದಾಗಿದ್ದಾರೆ.

ಇನ್ನು ಕರ್ನಾಟಕದಲ್ಲಿ 680 ಅನುದಾನರಹಿತ ಶಾಲಾ ಕಾಲೇಜುಗಳಿವೆ. ಸುಮರು 20ಸಾವಿರಕ್ಕಿಂತ ಹೆಚ್ಚು ಶಿಕ್ಷಕರು ಇದ್ದಾರೆ. ಅಷ್ಟೇ ಅಲ್ಲದೆ ತಮ್ಮ ಬೇಡಿಕೆ ಈಡೇರಿಕೆಗೆ ಹಲವು ಬಾರಿ ಹೋರಾಟ ಮಾಡಿದ್ದಾರೆ. ಆದರೆ ಸರ್ಕಾರ ಮಾತ್ರ ಹಾರಿಕೆ ಉತ್ತರ ನೀಡುತ್ತ ಬಂದಿದೆ. ಆದ ಕಾರಣ ಮೇ. 5 ರಂದು ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಾವಿರಾರು ಶಿಕ್ಷಕರು ಸೇರಿ ಪ್ರತಿಭಟನೆ ಮಾಡಲಯ ಮುಂದಾಗಿದ್ದಾರೆ...

ಒಟ್ಟಿನಲ್ಲಿ ಜೂನ ತಿಂಗಳಲ್ಲಿ ಬರುವ ಶಿಕ್ಷಕರ ಚುನಾವಣೆಗೆ ಪಕ್ಷಗಳಿಂದ ಅಭ್ಯರ್ಥಿಗಳನ್ನು ಅಂತಿಮಗೊಳಿಸುವತ್ತ ಚಿಂತನೆ ನಡೆಸಿದ್ದಾರೆ. ಇತ್ತ ಸಾವಿರಾರು ಶಿಕ್ಷಕರು ತಮ್ಮ ಬೇಡಿಕೆಗಳನ್ನು ಈಡೇರಿಸದ ಸರ್ಕಾರದ ವಿರುದ್ಧ ಗರಂ ಆಗಿ ಎಲ್ಲ ಚುನಾವಣೆಯನ್ನು ಬಹಿಷ್ಕಾರ ಮಾಡಲು ಮುಂದಾಗಿದ್ದಾರೆ. ಈ ಬಾರಿ ಶಿಕ್ಷಕರ ಚುನಾವಣೆ ಹೇಗೆ ನಡೆಯುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ.

Edited By :
Kshetra Samachara

Kshetra Samachara

04/05/2022 02:49 pm

Cinque Terre

74.6 K

Cinque Terre

5

ಸಂಬಂಧಿತ ಸುದ್ದಿ