ಧಾರವಾಡ: ಮೊನ್ನೆ ರಮ್ಯಾ ರೆಸಿಡೆನ್ಸಿಯಲ್ಲಿ ಇಸ್ಪೀಟ್ ರೇಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾದ ರಾಜ್ಯ ಉಪಾಧ್ಯಕ್ಷ ಇಮ್ರಾನ್ ಕಳ್ಳಿಮನಿ ಪ್ರತಿಕ್ರಿಯೆ ನೀಡಿದ್ದಾರೆ.
ರಮ್ಯಾ ರೆಸಿಡೆನ್ಸಿಗೆ ನಮ್ಮ ಕಾಂಗ್ರೆಸ್ ಮುಖಂಡರಾದ ಇಸ್ಮಾಯಿಲ್ ತಮಟಗಾರ ಅವರು ದೀಪಾವಳಿ ಪೂಜೆಗೆ ಹೋಗಿದ್ದರು ಎಂಬ ಮಾಹಿತಿ ಇದೆ. ಈಗಾಗಲೇ ಈ ಸಂಬಂಧ ದೂರು ಕೂಡ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಯಾರು ತಪ್ಪಿತಸ್ಥರು ಯಾರು ತಪ್ಪಿತಸ್ಥರಲ್ಲ ಎಂಬುದು ಗೊತ್ತಾಗಲಿದೆ. ದೀಪಾವಳಿ ಪೂಜೆಗೆ ಎಲ್ಲ ಪಕ್ಷದವರು ರೆಸಿಡೆನ್ಸಿಗೆ ಹೋಗಿದ್ದರು. ಇಸ್ಮಾಯಿಲ್ ಕೂಡ ಹೋಗಿದ್ದರು. ಅದೇ ವೇಳೆ ಪೊಲೀಸ್ ರೇಡ್ ಆಗಿದೆ. ಇದು ರಾಜಕೀಯ ಪ್ರೇರಿತವಾದಂತುದು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಕಾಗೆ ಕುಳಿತುಕೊಳ್ಳುವುದಕ್ಕೂ ಟೊಂಗೆ ಮುರಿಯುವುದಕ್ಕೂ ಸಾಟಿಯಾಗಿದೆ. ಇಸ್ಮಾಯಿಲ್ ಇದರಿಂದ ಹೊರಗಡೆ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Kshetra Samachara
18/11/2020 05:56 pm