ಹುಬ್ಬಳ್ಳಿ: ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆಗೆ ಹುಬ್ಬಳ್ಳಿಯ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಕೇಂದ್ರದ ಖಾದಿ ಕೇಂದ್ರದಲ್ಲಿ ತಯಾರಾದ ಹತ್ತು ರಾಷ್ಟ್ರಧ್ವಜಗಳನ್ನು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ ಅವರ ಮೂಲಕ ಕಳಿಸಲಾಗಿದೆ.
ಈಗಾಗಲೇ ಸಾಕಷ್ಟು ಹೋರಾಟದ ಮೂಲಕ ಜನಮನ್ನಣೆ ಪಡೆದಿರುವ ಹುಬ್ಬಳ್ಳಿಯ ಬೆಂಗೇರಿ ರಾಷ್ಟ್ರೀಯ ಖಾದಿ ಧ್ವಜ ಈಗ ಮತ್ತೊಂದು ಮಹತ್ವದ ಹೋರಾಟದ ರೂವಾರಿಯಾಗಿ ಬಿಂಬಿತಗೊಳ್ಳಲಿದೆ. ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಅವರು ಧ್ವಜ ಖರೀದಿಸಿ ರಾಹುಲ್ ಗಾಂಧಿ ಅವರಿಗೆ ಕಳಿಸಿಕೊಟ್ಟಿದ್ದಾರೆ.
ಇನ್ನೂ ರಾಜ್ಯದಲ್ಲಿ 21 ದಿನ ಪಾದಯಾತ್ರೆ ನಡೆಯಲಿದ್ದು, 511 ಕಿಮೀ ಸಾಗಲಿದೆ. ಎಲ್ಲೆಡೆ ಈ ಧ್ವಜಗಳ ಪ್ರದರ್ಶನ ಆಗಲಿದ್ದು, ಹುಬ್ಬಳ್ಳಿಯ ಹಿರಿಮೆ ದೇಶಾದ್ಯಂತ ವ್ಯಾಪಿಸಲಿದೆ.
Kshetra Samachara
24/08/2022 11:19 am