ನವಲಗುಂದ : ಶಾಲೆಗೆ ತೆರಳಲು ಉತ್ತಮ ರಸ್ತೆಯಿಲ್ಲ. ವಾಹನಗಳು ಶಾಲೆಯವರೆಗೂ ಹೋಗಲು ಸಾಧ್ಯವಾಗದ ದುಸ್ಥಿತಿ. ಮಕ್ಕಳು ಬೀಳುತ್ತಾ ಏಳುತ್ತಾ ಓಡಾಟ ನಡೆಸೋ ದೃಶ್ಯಗಳು, ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಅಧಿಕಾರಿಗಳು ಕೈ ಕಟ್ಟಿ ಕುತ್ತಿದ್ದಾರೆ ಅನ್ನೋ ಆರೋಪ. ಇದೆಲ್ಲಾ ಕಂಡು ಬಂದದ್ದು, ನವಲಗುಂದ ಪಟ್ಟಣದ ಹೊರವಲಯದಲ್ಲಿನ ಎಸ್.ಎಸ್ ಬಾಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ.
ಇನ್ನು ವಿದ್ಯಾರ್ಥಿಗಳು ಮಳೆಗಾಲದಲ್ಲಿ ಪ್ರತಿನಿತ್ಯ ಇದೇ ರಸ್ತೆಯಲ್ಲಿ ಕೈಯಲ್ಲಿ ಚಪ್ಪಲಿ ಹಿಡಿದು, ಏಳುತ್ತ, ಬೀಳುತ್ತ ಶಾಲೆಗೆ ಹೋಗಿ ಬರುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳು ಏನು ಹೇಳುತ್ತಾರೆ ನೀವೇ ಕೇಳಿ...
98 ವಿದ್ಯಾರ್ಥಿಗಳು ಹಾಗೂ ಎಂಟು ಸಿಬ್ಬಂದಿ ಇರುವ ಶಾಲೆ ರಸ್ತೆಯ ಕರ್ಮವನ್ನು ಕಣ್ಣಾರೆ ಕಂಡ ಪಾಲಕರು ಈಗ ಆತಂಕದಲ್ಲಿ ಇದ್ದಾರೆ. ಪ್ರತಿದಿನ ಮಕ್ಕಳು ಇಂತಹ ರಸ್ತೆಯಲ್ಲಿ ಸಂಚರಿಸುವುದು ಈಗ ಪಾಲಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಬಗ್ಗೆ ಪಾಲಕರು ಪಬ್ಲಿಕ್ ನೆಕ್ಸ್ಟ್ ನೊಂದಿಗೆ ಮಾತನಾಡಿದ್ದು ಹೀಗೆ...
ಇಂತಹ ರಸ್ತೆಯನ್ನು ನೋಡಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಸ್ಪಂದಿಸಬೇಕಿದೆ. ಅಧಿಕಾರಿಗಳಿಂದ ಈ ರಸ್ತೆಯನ್ನು ಡಾಂಬರೀಕರಣ ಮಾಡಬೇಕಿದೆ ಎಂಬುದು ಸಾರ್ವಜನಿಕ ಆಗ್ರಹ ಸಹ ಆಗಿದೆ.
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ.
Kshetra Samachara
10/07/2022 04:19 pm