ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಮಹತ್ವದ ಯೋಜನೆಯಲ್ಲಿ ಒಂದಾಗಿರುವ ಕಳಸಾ ಭಂಡೂರಿ, ಬೆಣ್ಣೆ ಹಳ್ಳ ಹಾಗೂ ತುಪ್ಪರಿ ಹಳ್ಳದ ಯೋಜನೆಗಳು ನಮಗೆ ಸಾಕಷ್ಟು ಮುಖ್ಯವಾದ ಯೋಜನೆಗಳಾಗಿವೆ. ತುಪ್ಪರಿಹಳ್ಳದ ಮಾದರಿಯಲ್ಲಿ ಬೆಣ್ಣಿ ಹಳ್ಳದ ಹಾಗೂ ಮಹದಾಯಿ ಯೋಜನೆಗೆ ರಾಜ್ಯ ಸರ್ಕಾರ ಸಾಕಷ್ಟು ಒತ್ತನ್ನು ನೀಡಿದ್ದು, ಕೆಲವು ದಿನಗಳಲ್ಲಿ ಜನರ ಸಮಸ್ಯೆಗಳಿಗೆ ಪೂರಕವಾದ ಸ್ಪಂದನೆಯನ್ನು ನೀಡಲಾಗುತ್ತದೆ ಎಂದು ಸಚಿವರಾದ ಶಂಕರಪಾಟೀಲ ಮುನೇನಕೊಪ್ಪ ಭರವಸೆ ನೀಡಿದರು.
ಏತ ನೀರಾವರಿ ಯೋಜನೆ ಸಮೀಕ್ಷೆ ವೇಳೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಈಗಾಗಲೇ ಮಹದಾಯಿ ಬಗ್ಗೆ ನ್ಯಾಯಾಧೀಕರಣ ಹೋರಾಟ ನಡೆದಿದೆ. ಬಜೆಟ್ ನಲ್ಲಿ ಕೂಡ ಸಾವಿರ ಕೋಟಿ ಅನುದಾನವನ್ನು ಮೀಸಲು ಇಡಲಾಗಿದೆ. ಅದೇ ರೀತಿಯಲ್ಲಿ ತುಪ್ಪರಿಹಳ್ಳದ ಯೋಜನೆಯಲ್ಲಿ ನಾವು ಯಶಸ್ವಿ ಸಾಧಿಸಿದ ರೀತಿಯಲ್ಲಿ ಬೆಣ್ಣೆ ಹಳ್ಳದ ಸಮಸ್ಯೆಗೆ ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಸ್ಪಂದನೆ ನೀಡಿದ್ದಾರೆ ಎಂದರು.
ಇವತ್ತು ಚಾಲನೆ ನೀಡಿರುವ ಏತ ನೀರಾವರಿ ಯೋಜನೆ ಇದು ಕೂಡ ಸುಮಾರು ನೂರಾರು ವರ್ಷಗಳ ಕನಸಾಗಿದ್ದು, ಈ ಯೋಜನೆಯಿಂದ ಸಾವಿರ ಹೆಕ್ಟೇರ್ ಭೂಮಿಗೆ ನೀರಾವರಿ ಯೋಜನೆ ಒದಗಿಸಲಾಗುತ್ತದೆ. ಇದರಿಂದ ರೈತರ ಕೃಷಿ ಚಟುವಟಿಕೆಗಳ ಜೊತೆಗೆ ಅಂತರ್ಜಲ ಮಟ್ಟವನ್ನು ಕೂಡ ಹೆಚ್ಚಿಸುವ ಕಾರ್ಯವನ್ನು ಮಾಡಲಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ಡ್ರೋನ್ ಸಮೀಕ್ಷೆ ಆರಂಭ ಮಾಡಿದೆ. ಎರಡು ಕಡೆಯಲ್ಲಿ 89 ಲಕ್ಷ ವೆಚ್ಚದಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷೆ ಪೂರ್ಣಗೊಂಡ ಬೆನ್ನಲ್ಲೇ ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ ಅಂದಾಜು 100ಕೋಟಿ ಮೊತ್ತದಲ್ಲಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗುತ್ತದೆ ಎಂದು ಅವರು ಹೇಳಿದರು.
Kshetra Samachara
09/07/2022 08:08 pm