ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ನೂತನ ಶಾಲಾ ಕಟ್ಟಡ ಹಾಗೂ ರಸ್ತೆ ಕಾಮಗಾರಿಗಳಿಗೆ ಸಚಿವ ಮುನೇನಕೊಪ್ಪ ಚಾಲನೆ

ಅಣ್ಣಿಗೇರಿ: ತಾಲೂಕಿನ ಶಿಶ್ವಿನಹಳ್ಳಿ ಗ್ರಾಮದಲ್ಲಿ 75 ಲಕ್ಷ ರೂಪಾಯಿ ಅನುದಾನದ ಅಡಿಯಲ್ಲಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ನೂತನ 5 ಶಾಲಾ ಕಟ್ಟಡಗಳನ್ನು ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರು ಉದ್ಘಾಟನೆ ಮಾಡಿದವರು. ಹಾಗೂ ಐದು ಲಕ್ಷ ರೂಪಾಯಿ ಅನುದಾನದ ನೂತನ ಕನಕ ಭವನದ ಗುದ್ದಲಿ ಪೂಜೆ ಮಾಡಿದರು.

ಲೋಕೋಪಯೋಗಿ ಇಲಾಖೆಯ 2021-22 ನೇ ಸಾಲಿನ ಎಸ್ಎಚ್‌ಡಿಪಿ ಅನುದಾನದ ರೂ. 2.8 ಕೋಟಿ ಮೊತ್ತದಲ್ಲಿ ಅಣ್ಣಿಗೇರಿ - ಸೂಪಾ ರಾಜ್ಯ ಹೆದ್ದಾರಿಯ, ಶಿಶ್ವಿನಹಳ್ಳಿಯಿಂದ ಅಣ್ಣಿಗೇರಿಯ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಗ್ರಾಮದಲ್ಲಿ ಆಯೋಜಿಸಲಾದ ಗ್ರಾಮಸಭೆಯಲ್ಲಿ ಪಂಚಾಯತ್ 15ನೇ ಹಣಕಾಸಿನ ಯೋಜನೆಯಡಿಯಲ್ಲಿ ಗ್ರಾಮದ ವಿಕಲಚೇತನರಿಗೆ ಕುಕ್ಕರ್ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಮಾಯಾಚಾರಿ, ಭೂದಾನಿಗಳಾದ ಶ್ರೀ ಪ್ರಭುಗೌಡ ಪಾಟೀಲ, ತಾಲೂಕು ಬಿಜೆಪಿ ಅಧ್ಯಕ್ಷರಾದ ಶ್ರೀ ದಾನಪ್ಪಗೌಡರ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಬಸವಣ್ಣೆವ್ವ ಸುರೇಶ ಬೆಳದೊಡಿ, ಉಪಾಧ್ಯಕ್ಷರಾದ ಶ್ರೀಮತಿ ಚನ್ನವ್ವ ಕಾಳಿ, ಗ್ರಾಮ ಪಂಚಾಯತ್ ಸರ್ವ ಸದಸ್ಯರು ಹಾಗೂ ಶ್ರೀ ಸುರೇಶ ಬಣವಿ, ಶ್ರೀ ಕಲ್ಲಯ್ಯ ಬಣ್ಣದನೂಲಮಠ, ಶ್ರೀ ಚಂಬಣ್ಣ ಪುಗಟಿ, ಗ್ರಾಮದ ಗುರು ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

26/06/2022 07:21 am

Cinque Terre

28.32 K

Cinque Terre

0

ಸಂಬಂಧಿತ ಸುದ್ದಿ