ಹುಬ್ಬಳ್ಳಿ: ಉಣಕಲ್ ಕೆರೆ ನೂರಾರು ವರ್ಷಗಳ ಇತಿಹಾಸ ಇರುವ ಕೆರೆಯಾಗಿದೆ. ಸರ್ ಎಂ.ವಿಶ್ವೇಶ್ವರಯ್ಯ ಅವರು ಹುಬ್ಬಳ್ಳಿ ನಗರದ ಜನತೆಗೆ ಕುಡಿಯಲು ನೀರು ಒದಗಿಸಲು ಈ ಕೆರೆಯ ಯೋಜನೆ ಹಾಕಿಕೊಟ್ಟರು. ಇಂತಹ ಇತಿಹಾಸ ಪ್ರಸಿದ್ಧ ಕೆರೆಗೆ ಸಂಪ್ರದಾಯದಂತೆ ಗಂಗಾ ಪೂಜೆ ಮಾಡಿ ಬಾಗಿನ ಅರ್ಪಣೆ ಮಾಡಿದ್ದೇವೆ. ಬರುವ ದಿನಗಳಲ್ಲಿ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡಲಾಗುವುದು ಎಂದು ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಹೇಳಿದರು.
ಉಣಕಲ್ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಉಣಕಲ್ ಕೆರೆ ಕಾಮಗಾರಿ ವಿಳಂಬವಾಗುತ್ತಿರುವ ಪ್ರಶ್ನೆಗೆ ಉತ್ತರ ನೀಡಿದ ಕೊರವಿ ಅವರು, ನಮಗೆ ಇನ್ನೂ ಅಧಿಕಾರ ಬಂದಿಲ್ಲಾ. ಇದೆ 28ಕ್ಕೆ ಅಧಿಕಾರ ನೀಡಿದ ಕೂಡಲೆ ಉಣಕಲ್ ಕೆರೆಯನ್ನು ಆದಷ್ಟು ಬೇಗ ಸ್ಮಾರ್ಟ್ ಮಾಡಲಾಗುತ್ತದೆ ಎಂದು ಆಶ್ವಾಸನೆ ನೀಡಿದರು.
Kshetra Samachara
22/05/2022 01:46 pm