ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಳ್ಳ ಹಿಡಿದ ಕೋಟ್ಯಾಂತರ ವೆಚ್ಚದ ಯೋಜನೆ: ಘನತೆ ಕಳೆದುಕೊಂಡ ಘನ ತ್ಯಾಜ್ಯ ವಿಲೇವಾರಿ ಘಟಕ...!

ಹುಬ್ಬಳ್ಳಿ: ಅದು ಕೋಟ್ಯಾಂತರ ರೂಪಾಯಿ ವ್ಯಯ ಮಾಡಿ ನಿರ್ಮಾಣ ಮಾಡಿರುವ ಘಟಕ. ಸಾಕಷ್ಟು ಭರವಸೆಯನ್ನು ಹುಟ್ಟು ಹಾಕಿದ್ದ ಈ ಯೋಜನೆ ಈಗ ಹೊಳೆಯಲ್ಲಿ ಹೋಮ ಮಾಡಿದಂತಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯವೋ, ನಿರ್ವಹಣೆ ಕೊರತೆಯೋ ಯೋಜನೆ ಮಾತ್ರ ಹಳ್ಳ ಹಿಡಿದಿದೆ. ಅಷ್ಟಕ್ಕೂ ಆ ಯೋಜನೆ ಆದರೂ ಏನು...? ಆಗಿದ್ದಾದರೂ ಏನು ಎಂಬುವಂತ ಸ್ಪಷ್ಟ ಮಾಹಿತಿ ಬಿಚ್ಚಿಡುತ್ತಿದೆ ನಿಮ್ಮ ಪಬ್ಲಿಕ್ ನೆಕ್ಸ್ಟ್...

ಹೀಗೆ ಸರಿಯಾಗಿ ನಿರ್ವಹಣೆಯಾಗದೇ ಬಿದ್ದಿರುವ ತ್ಯಾಜ್ಯ. ಆಕಾಶೆದೆತ್ತರಕ್ಕೆ ಕಿನ್ನಾಲಿಗೆ ಚಾಚಿದ ಬೆಂಕಿ ಇದೆಲ್ಲದಕ್ಕೂ ಸಾಕ್ಷಿಯಾಗಿರುವುದು ಕಾರವಾರ ರಸ್ತೆಯಲ್ಲಿರುವ ಘನ ತ್ಯಾಜ್ಯ ನಿರ್ವಹಣೆ ಘಟಕ. ಹೌದು.. ಕಾರವಾರ ರಸ್ತೆಯಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕ ಅವ್ಯವಸ್ಥೆ ಆಗರವಾಗಿದೆ. ಹಸಿ ಕಸ ಹಾಗೂ ಒಣಕಸವನ್ನು ಸರಿಯಾಗಿ ಬೇರ್ಪಡಿಸದೇ ಬೇಕಾಬಿಟ್ಟಿಯಾಗಿ ಎಸೆದು ಬರಲಾಗುತ್ತಿದೆ. ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಪುನರ್ಬಳಕೆ ಹಾಗೂ ಇಂಧನ ತಯಾರಿಕೆ ಭರವಸೆ ನೀಡಿದ್ದ ಮಹಾನಗರ ಪಾಲಿಕೆ ತ್ಯಾಜ್ಯ ನಿರ್ವಹಣೆ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಹಣವನ್ನು ಪೋಲು ಮಾಡುತ್ತಿದೆ. ಇನ್ನೂ ಏಕಾಏಕಿ ಅವ್ಯವಸ್ಥಿತವಾಗಿ ಬೆಂಕಿ ಹಚ್ಚುವ ಮೂಲಕ ಜನರಲ್ಲಿ ಆತಂಕವನ್ನುಂಟು ಮಾಡುವ ಕೆಲಸವನ್ನು ಸಿಬ್ಬಂದಿ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಇಂತಹದೊಂದು ಅವ್ಯವಸ್ಥೆ ತಾಂಡವವಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಕಂಡರು ಕಾಣದಂತೆ. ಕೇಳಿದರು ಕೇಳದಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತ್ಯಾಜ್ಯ ವಿಲೇವಾರಿ ಬಳಿಕ ಗ್ಯಾಸ್ ಸೇರಿದಂತೆ ಹಲವಾರು ಪುನರ್ ಬಳಕೆ ಉತ್ಪನ್ನಗಳನ್ನು ಸಿದ್ಧ ಪಡಿಸುವ ಹುಸಿ ಆಶ್ವಾಸನೇ ನೀಡುತ್ತಿದ್ದಾರೆ. ಆದರೆ ಯಾವೊಂದು ಮಾತು ಕೂಡ ಕಾರ್ಯರೂಪಕ್ಕೆ ಬರುತ್ತಿಲ್ಲ.

ಒಟ್ಟಿನಲ್ಲಿ ಇಂತಹದೊಂದು ಅವ್ಯವಸ್ಥೆಗೆ ಬ್ರೇಕ್ ಹಾಕಬೇಕಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಕೂಡಲೇ ಸರಿಯಾದ ನಿರ್ವಹಣೆ ಕ್ರಮ ಕೈಗೊಳ್ಳಬೇಕಿದೆ.

-ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Shivu K
Kshetra Samachara

Kshetra Samachara

09/03/2022 09:45 am

Cinque Terre

25.5 K

Cinque Terre

7

ಸಂಬಂಧಿತ ಸುದ್ದಿ