ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬದಲಾಗುತ್ತಿವೆ ಧಾರವಾಡದ ರಸ್ತೆಗಳು

ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ

ಧಾರವಾಡ: ಅರವಿಂದ ಬೆಲ್ಲದ. ಹುಬ್ಬಳ್ಳಿ, ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕರು. ಇವರ ದೂರದೃಷ್ಠಿಯ ವಿಚಾರ, ಅಭಿವೃದ್ಧಿಪರ ಚಿಂತನೆಗೆ ಸಾಕ್ಷಿಯಾದಂತಿವೆ ಧಾರವಾಡದ ಕೆಲ ರಸ್ತೆಗಳು.

ಹೌದು! ಹೀಗೆ ಪಳಪಳನೆ ಹೊಳೆಯುತ್ತಿರುವ ಕಾಂಕ್ರೀಟ್ ರಸ್ತೆಗಳು ನಿರ್ಮಾಣವಾಗಿದ್ದು ಧಾರವಾಡದಲ್ಲಿ. ಹಲವಾರು ದಶಕಗಳಿಂದ ಡಾಂಬರೀಕರಣವನ್ನೇ ಕಾಣದ ರಸ್ತೆಗಳಿಗೀಗ ಅರವಿಂದ ಬೆಲ್ಲದ ಅವರ ಕಾಲದಲ್ಲಿ ಕಾಂಕ್ರೀಟ್ ಭಾಗ್ಯ ಒದಗಿ ಬಂದಿದೆ. ಅವಳಿನಗರದ ಹಲವಾರು ರಸ್ತೆಗಳು ಇದೀಗ ದುರಸ್ಥಿಯಾಗಿದ್ದು, ಇನ್ನೂ ಅನೇಕ ರಸ್ತೆಗಳಿಗೆ ದುರಸ್ಥಿ ಭಾಗ್ಯ ಒದಗಿ ಬರಬೇಕಿದೆ.

ಹುಬ್ಬಳ್ಳಿ, ಧಾರವಾಡ ಅವಳಿನಗರದಲ್ಲಿ ಒಂದು ಹಂತದಲ್ಲಿ ಕಾಂಕ್ರೀಟ್ ಕಾಮಗಾರಿಗೆ ಮುನ್ನುಡಿ ಬರೆದವರೇ ಶಾಸಕ ಅರವಿಂದ ಬೆಲ್ಲದ ಎನ್ನಲಾಗುತ್ತದೆ. ಧಾರವಾಡದ ಗಿರಿನಗರ ರಸ್ತೆ ಡಾಂಬರೀಕರಣ ಕಂಡು ಅನೇಕ ದಶಕಗಳೇ ಕಳೆದಿದ್ದವು. ಇದೀಗ ಆ ರಸ್ತೆ ಅಗಲೀಕರಣದ ಜೊತೆಗೆ ಸುಸಜ್ಜಿತ ರಸ್ತೆಯಾಗಿ ಪರಿವರ್ತನೆಯಾಗುತ್ತಿದೆ.

ಧಾರವಾಡದ ಕೆಲಗೇರಿ, ಸಾಯಿಬಾಬಾ ದೇವಸ್ಥಾನದ ರಸ್ತೆ, ಸನ್ಮತಿ ನಗರ, ಉದಯಗಿರಿ, ತೇಜಸ್ವಿನಗರ ಬ್ರಿಡ್ಜ್, ಕಲ್ಯಾಣನಗರ, ಶ್ರೀನಗರ, ಶಿವಗಿರಿ, ಜಯನಗರ, ಸನ್ಮತಿನಗರ ಹೀಗೆ ಅನೇಕ ಕಡೆಗಳಲ್ಲಿನ ರಸ್ತೆಗಳು ಇದೀಗ ಸುಸಜ್ಜಿತ ಕಾಂಕ್ರೀಟ್ ರಸ್ತೆಗಳಾಗಿ ಪರಿವರ್ತನೆಗೊಂಡಿವೆ.

ಶಾಸಕರು ಜನರ ಹಿತಾಸಕ್ತಿಯ ಜೊತೆಗೆ ಕಾಮಗಾರಿಯಲ್ಲೂ ಗುಣಮಟ್ಟವನ್ನು ಕಾಯ್ದುಕೊಂಡಿದ್ದಾರೆ. ತೇಜಸ್ವಿನಗರದ ಬ್ರಿಡ್ಜ್ ಮೇಲಿನ ರಸ್ತೆ ಹದಗೆಟ್ಟು ಸಾಕಷ್ಟು ಸಮಸ್ಯೆಯಾಗಿತ್ತು. ಇದೀಗ ಕೆಲವೇ ದಿನಗಳಲ್ಲಿ ಅಲ್ಲಿ ಸುಸಜ್ಜಿತ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿಸಿ ಬೆಲ್ಲದ ಬೇಷ್ ಎನಿಸಿಕೊಂಡಿದ್ದಾರೆ. ಇದಲ್ಲದೇ ನಗರದ ಅನೇಕ ಒಳರಸ್ತೆಗಳಿಗೂ ಕಾಂಕ್ರೀಟ್ ಹಾಕಿಸುವುದರ ಜೊತೆಗೆ ಅಗತ್ಯವಿದ್ದಲ್ಲಿ ಫೇವರ್ಸ್‌ಗಳನ್ನೂ ಹಾಕಿಸಿರುವ ಬೆಲ್ಲದ, ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

ಸದ್ಯ ಹಲವಾರು ಕಡೆಗಳಲ್ಲಿ ಬೆಲ್ಲದ ಅವರ ಕಾಳಜಿ ಮತ್ತು ಕರ್ತವ್ಯದಿಂದಾಗಿ ರಸ್ತೆಗಳು ಸುಧಾರಣೆ ಕಂಡಿವೆ. ಇನ್ನೂ ಅನೇಕ ಕಡೆಗಳಲ್ಲಿ ರಸ್ತೆಗಳು ಸುಧಾರಣೆ ಕಾಣಬೇಕಿದ್ದು, ಅವುಗಳ ಮೇಲೂ ಶಾಸಕರು ಬೆಳಕು ಚೆಲ್ಲಬೇಕಿದೆ. ಏನೇ ಆಗಲಿ ಯುವ ನಾಯಕರಾದ ಶಾಸಕ ಅರವಿಂದ ಬೆಲ್ಲದ ಅವರು ದೂರದೃಷ್ಠಿಯ ವಿಚಾರಗಳನ್ನಿಟ್ಟುಕೊಂಡು ಸಾಕಷ್ಟು ರಸ್ತೆಗಳ ಸುಧಾರಣೆಗೆ ಮುಂದಾಗಿದ್ದಾರೆ. ಶಾಸಕರ ಈ ಜನಪರ ಕಾರ್ಯಗಳು ಹೀಗೇ ಮುಂದುವರೆಯುವಂತಾಗಲಿ.

Edited By : Nagesh Gaonkar
Kshetra Samachara

Kshetra Samachara

11/01/2022 09:16 pm

Cinque Terre

58.18 K

Cinque Terre

8

ಸಂಬಂಧಿತ ಸುದ್ದಿ