ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರೂ ಯಾವುದೇ ಪ್ರಯೋಜವಾಗಿರಲಿಲ್ಲ. ಗ್ರಾಮಸ್ಥರ ಸಮಸ್ಯೆ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಭಿತ್ತರಿಸಿದ ಬೆನ್ನಲ್ಲೇ ತಹಶಿಲ್ದಾರರ ಹಾಗೂ ಜಿಲ್ಲಾಡಳಿತ ಎಚ್ಚೇತ್ತುಕೊಂಡು ಕೋಳಿವಾಡ ಗ್ರಾಮಕ್ಕೆ ಆಗಮಿಸಿ ಗ್ರಾಮಸ್ಥರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದು, ಇದು ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯ ಬಿಗ್ ಇಂಪ್ಯಾಕ್ಟ್ ಆಗಿದೆ.
ಹೌದು.. ಸಚಿವ ಮುನೇನಕೊಪ್ಪ ಅವರ ಕ್ಷೇತ್ರ, ಡಿಸಿಯವರ ಮಾವನ ಊರಿನಲ್ಲಿಯೇ ಇಂತಹದೊಂದು ಅವ್ಯವಸ್ಥೆ ಎಂಬುವಂತ ಶೀರ್ಷಿಕೆ ಅಡಿಯಲ್ಲಿ ವರದಿಯೊಂದನ್ನು ಬಿತ್ತರಿಸಿದ ಕೆಲವು ಗಂಟೆಗಳಲ್ಲಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಸಾರ್ವಜನಿಕ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಕೋಳಿವಾಡ ಗ್ರಾಮದ ಜನರ ಸಮಸ್ಯೆ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ಜಿಲ್ಲಾಡಳಿತದ ಗಮನಕ್ಕೆ ಹಾಗೂ ಸಚಿವರ ಗಮನಕ್ಕೆ ತಂದಿತ್ತು. ವರದಿಯಿಂದ ಎಚ್ಚೇತ್ತುಕೊಂಡ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ದೌಡಾಯಿಸಿದ್ದಾರೆ.
ಸಮಸ್ಯೆ ಏನೇ ಇರಲಿ... ಪಬ್ಲಿಕ್ ನೆಕ್ಸ್ಟ್ ಸದಾ ನಿಮ್ಮ ಜೊತೆಗಿದೆ. ನಿಮ್ಮ ಸಾರ್ವಜನಿಕ ಸಮಸ್ಯೆಯೇ ನಮ್ಮ ಸಮಸ್ಯೆ ನಿಮ್ಮೊಂದಿಗೆ ಸದಾ ನಾವಿದ್ದೇವೆ.
Kshetra Samachara
16/11/2021 04:40 pm