ಹುಬ್ಬಳ್ಳಿ: ಅದು ಉತ್ತರ ಕರ್ನಾಟಕದ ಬಹುದೊಡ್ಡ ಹೋರಾಟ. ನಿರಂತರ ಹೋರಾಟದ ಫಲವಾಗಿ ಮಹದಾಯಿ ನ್ಯಾಯಾಧೀಕರಣದ ತೀರ್ಪು ಬಂದಿದೆ. ಕೇಂದ್ರ ಸರ್ಕಾರ ಗೆಜೆಟ್ ನೋಟಿಪೀಕೇಶನ್ ಹೊರಡಿಸಿದೆ. ರಾಜ್ಯ ಸರ್ಕಾರ 1600 ಕೋಟಿ ರೂಪಾಯಿಗಳನ್ನ ಕಾಮಗಾರಿಗೆ ತೆಗೆದಿಟ್ಟಿದೆ, ಆದರೂ ಕಾಮಗಾರಿ ಶುರುವಾಗಿಲ್ಲ. ಆದರೆ ಈಗ ಜನರಲ್ಲಿ ಆಶಾಭಾವನೆ ಮೊಳಕೆ ಒಡೆದಿದೆ. ಹಾಗಿದ್ದರೇ ಏನಿದು ಆಶಾಭಾವ ಅಂತೀರಾ ಈ ಸ್ಟೋರಿ ನೋಡಿ..
ಸುಮಾರು ನಾಲ್ಕು ದಶಕಗಳಿಂದ ಕಳಸಾ ಬಂಡೂರಿ ಹೋರಾಟ ನಡೆಯುತ್ತಲೇ ಇದೆ. ನಿರಂತರ ಹೋರಾಟದ ಫಲವಾಗಿ ನ್ಯಾಯಾಧಿಕರಣದ ತೀರ್ಪು ಹೊರ ಬಂದು ರಾಜ್ಯಗಳಿಗೆ ನೀರು ಹಂಚಿಕೆಯಾಗಿತ್ತು. ಬಳಿಕ ಗೆಜೆಟ್ ನೋಟಿಪಿಕೇಶನ್ ಆಗಿಲ್ಲ ಅಂತಾ ಸರ್ಕಾರ ಕುಂಟು ನೆಪ ಹೇಳುತ್ತಾ ಹೋದಾಗ,ಕೊನೆಗೆ ಸುಪ್ರೀಂ ಕೋರ್ಟ್ ಸೂಚನೆ ಮೆರೆಗೆ ಕೇಂದ್ರ ಸರ್ಕಾರ ಗೆಜೆಟ್ ನೋಟಿಪೀಕೇಶನ್ ಹೊರಡಿಸಿ ವರ್ಷಗಳೆ ಕಳೆಯುತ್ತಾ ಬಂದಿದ್ದರೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಇನ್ನೂ ರಾಜ್ಯ ಸರ್ಕಾರ ಕಳೆದೆರಡು ಬಜೆಟ್ ನಲ್ಲಿ ಮಹದಾಯಿಗಾಗಿ ಹಣ ತೆಗೆದಿಟ್ಟು ಕಾಮಗಾರಿ ಶುರು ಮಾಡದೆ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಇದರಿಂದ ಬೇಸತ್ತಿರುವ ಜನರಿಗೆ ಈಗ ಹೋರಾಟದಲ್ಲಿ ಭಾಗಿಯಾಗಿದ್ದ ನಾಯಕ ಸಚಿವರಾಗಿದ್ದು, ಸಾಕಷ್ಟು ಭರವಸೆಯನ್ನು ಹುಟ್ಟು ಹಾಕಿದೆ. ಹೌದು ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರ ನೇತೃತ್ವದಲ್ಲಿ ಈಗ ಜನರಿಗೆ ಕಾಮಗಾರಿ ಪ್ರಾರಂಭವಾಗುವ ಲಕ್ಷಣಗಳು ಕಾಣುತ್ತಿವೆ.
ಸಾಕಷ್ಟು ಹೋರಾಟಕ್ಕೆ ಫಲ ಸಿಕ್ಕಿದೆ ಎಂದುಕೊಂಡಿದ್ದ ಜನರಿಗೆ ಸರ್ಕಾರದ ನಡೆ ಬೇಸರವನ್ನುಂಟು ಮಾಡಿತ್ತು. ಆದರೆ ಈಗ ಹೋರಾಟದ ಮುತುವರ್ಜಿ ವಹಿಸಿದ್ದ ಶಂಕರಪಾಟೀಲ ಮುನೇನಕೊಪ್ಪ ಅವರು ಮಹದಾಯಿ ಕಾಮಗಾರಿಗೆ ಚಾಲನೆ ನೀಡುವ ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ ಸಚಿವ ಸ್ಥಾನವನ್ನು ಅಲಂಕರಿಸಿರುವ ಮುನೇನಕೊಪ್ಪ ಅವರಿಗೆ ಮಹದಾಯಿ ದೊಡ್ಡ ಚಾಲೆಂಜ್ ಎದುರಾಗಿದ್ದು, ಈ ಭಾಗದ ಅಭಿವೃದ್ಧಿಯ ಜೊತೆಗೆ ಮಹದಾಯಿ ನೀರು ಹರಿಸಲು ಕೈ ಜೋಡಿಸುತ್ತಾರೆಯೇ ಎಂಬುವುದನ್ನು ಕಾದು ನೋಡಬೇಕಿದೆ.
ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
10/08/2021 09:50 am