ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿನಯ ಕುಲಕರ್ಣಿ ಬಿಡುಗಡೆಗೆ ದೇವರ ಮೊರೆ ಹೋದ ಕಾರ್ಯಕರ್ತರ ಪಡೆ

ಅಣ್ಣಿಗೇರಿ : ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗಿಶಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಬಂಧಿಸಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಬಿಡುಗಡೆಗೆ ಪ್ರಾರ್ಥಿಸಿ ಅವರ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸೇರಿ ದೇವರ ಮೊರೆ ಹೋದ ಘಟನೆ ಅಣ್ಣೀಗೇರಿ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಆರಾಧ್ಯ ದೈವ ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ಇಂದು ಬೆಳ್ಳಂ ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಿ ಆದಷ್ಟು ಬೇಗನೆ ನಮ್ಮ ಮುಖಂಡ ವಿನಯ ಕುಲಕರ್ಣಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡಬೇಕೆಂದು ದೇವರಲ್ಲಿ ವಿನಂತಿಸಿದ್ದಾರೆ.

ಮುಖಂಡ ಚಂಬಣ್ಣ ಹಾಳದೋಟರ.ಮಂಜುನಾಥ ಮಾಯಣ್ಣವರ. ಶಿವಣ್ಣ ಬಾಳೋಜಿ. ಸಂಜೀವರಡ್ಡಿ ಅಮಡ್ಲ. ವೀರನಾರಾಯಣ ಬೆಂತೂರ.ಬುಡ್ಡೆಶರೀಫ ನದ್ದಿಮುಲ್ಲಾ. ಶಂಕ್ರು ಕುರಿ ಮೊದಲಾದ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

05/01/2021 12:46 pm

Cinque Terre

24.42 K

Cinque Terre

0

ಸಂಬಂಧಿತ ಸುದ್ದಿ