ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: 6.31 ಕೋಟಿ ಬಾಕಿ ಉಳಿಸಿಕೊಂಡ ಧಾರವಾಡ ಜಿಲ್ಲಾ ಪಂಚಾಯ್ತಿ

ಧಾರವಾಡ: ನರೇಗಾ ಯೋಜನೆಯಡಿ ನಡೆದ ಕಾಮಗಾರಿಗಳಿಗೆ ಸಾಮಗ್ರಿ ಪೂರೈಕೆ ಮಾಡಿದವರಿಗೆ ಹಣ ನೀಡದೇ ಇರುವುದರಿಂದ ಸಾಮಗ್ರಿ ಪೂರೈಕೆದಾರರು ಧಾರವಾಡದ ಜಿಲ್ಲಾ ಪಂಚಾಯ್ತಿ ಎದುರು ಪ್ರತಿಭಟನೆ ನಡೆಸಿದರು.

ನರೇಗಾ ಯೋಜನೆಯಡಿ ನಡೆದ ವಿವಿಧ ಕಾಮಗಾರಿಗಳಿಗೆ ಕಳೆದ ಮೂರು ವರ್ಷಗಳಿಂದ ಸಾಮಗ್ರಿ ಪೂರೈಕೆದಾರರು ವಿವಿಧ ಸಾಮಾನುಗಳನ್ನು ಪೂರೈಕೆ ಮಾಡಿದರೂ ಮೂರು ವರ್ಷಗಳಿಂದ ಬಾಕಿ ಹಣ ಇಟ್ಟುಕೊಳ್ಳಲಾಗಿದೆ ಎಂದು ಸುಮಾರು 30 ಜನ ಸಾಮಗ್ರಿ ಪೂರೈಕೆದಾರರು ಜಿಲ್ಲಾ ಪಂಚಾಯ್ತಿ ಎದುರು ಪ್ರತಿಭಟನೆ ನಡೆಸಿ, ಸಿಇಓ ಸುರೇಶ ಇಟ್ನಾಳ ಅವರಿಗೆ ಮನವಿ ಸಲ್ಲಿಸಿದರು.

ಧಾರವಾಡ ಜಿಲ್ಲೆಯಾದ್ಯಂತ ಜಿಲ್ಲಾ ಪಂಚಾಯ್ತಿ ಕಳೆದ ಮೂರು ವರ್ಷಗಳಿಂದ 6 ಕೋಟಿ 31 ಲಕ್ಷ ರೂಪಾಯಿ ಹಣವನ್ನು ಸಾಮಗ್ರಿ ಪೂರೈಕೆದಾರರಿಗೆ ಕೊಡುವುದನ್ನು ಬಾಕಿ ಇರಿಸಿಕೊಂಡಿದೆ. ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಸಿಇಓ ಹಾಗೂ ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ಕೂಡ ನಡೆಯಿತು. ಈ ಸಂಬಂಧ ಎಸಿಬಿಗೆ ದೂರು ನೀಡಿ ಎಂದು ಸಿಇಓ ಪ್ರತಿಭಟನಾಕಾರರಿಗೆ ಹೇಳಿ, ಆದಷ್ಟು ಬೇಗ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.

Edited By : Somashekar
Kshetra Samachara

Kshetra Samachara

15/06/2022 03:24 pm

Cinque Terre

36.38 K

Cinque Terre

3

ಸಂಬಂಧಿತ ಸುದ್ದಿ