ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಹನಸಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ

ನವಲಗುಂದ : ನವಲಗುಂದ ತಾಲೂಕಿನ ಹನಸಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜಾ ಸಮಾರಂಭದಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಭಾಗಿಯಾಗಿ, ಕಾಮಗಾರಿಗೆ ಚಾಲನೆ ನೀಡಿದರು.

ಲೋಕೋಪಯೋಗಿ ಇಲಾಖೆ 2021-22 ನೇ ಸಾಲಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎಸ್ಎಚ್‌ಡಿಪಿ) ಅಡಿಯಲ್ಲಿ ಮೊತ್ತ ರೂ 1020 ಲಕ್ಷ ಅನುದಾನದಲ್ಲಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬೀಡಿ- ಬೆಳವಣಿಕೆ ರಾಜ್ಯ ಹೆದ್ದಾರಿ -56ರ ಕಿ.ಮೀ.62.95 ರಿಂದ ಕಿ.ಮೀ.69.28 ರವರೆಗೆ (ಬ್ಯಾಲ್ಯಾಳ ದಿಂದ ಹೆಬ್ಬಾಳ ಗ್ರಾಮದ ವರೆಗೆ) ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹಾದೇವಿ ಗೊಬ್ಬರಗುಂಪಿ, ಉಪಾಧ್ಯಕ್ಷರಾದ ಶಾರವ್ವ ಶಾಸ್ತ್ರೀಮಠ, ಎಪಿಎಮ್‌ಸಿ ಸದಸ್ಯರಾದ ಉಮೇಶ ಜಕಾತಿ, ಚಂದ್ರಯ್ಯ ಹಿರೇಮಠ, ಸಂಗನಗೌಡ ಹುಡೇದ, ಮಲ್ಲಿಕಾರ್ಜುನ ಗುಂಜಾಳ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಅಡಿವೆಪ್ಪ ಮನಮಿ ಹಾಗೂ ಗ್ರಾಮದ ಗುರು ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

22/06/2022 04:24 pm

Cinque Terre

8.84 K

Cinque Terre

1

ಸಂಬಂಧಿತ ಸುದ್ದಿ