ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಂಬಿಸಿ ಮೋಸ ಮಾಡಿದ ಜನಪ್ರತಿನಿಧಿಗಳು: ಶಾಸಕರ ಮನೆಮುಂದೆ ಧರಣಿಗೆ ನಿರ್ಧರಿಸಿದ ಅಮಾಯಕರು

ಹುಬ್ಬಳ್ಳಿ: ಅವರೆಲ್ಲ ಹೊಟ್ಟೆಗೆ ಬಟ್ಟಿ ಕಟ್ಟಿಕೊಂಡು ತಮ್ಮ ಸುಖಜೀವನ ಕಳೆಯಲು ಅಲ್ಪ ಸ್ವಲ್ಪ ಜಾಗ ಹಿಡಿದು ಮನೆ ಕಟ್ಟಿಕೊಂಡಿದ್ದರು. ಆದರೆ ಜನಪ್ರತಿನಿಧಿಗಳ ಬಣ್ಣದ ಮಾತಿಗೆ ಮರುಳಾಗಿ ಜಾಗ ಕೊಟ್ಟು ಬೀದಿಯಲ್ಲಿ ವಾಸ ಮಾಡುವ ಪರಿಸ್ಥಿತಿ ಎದುರಾಗಿದೆ. ಅಷ್ಟಕ್ಕೂ ಈ ಸ್ಟೋರಿ ಏನು ಅಂತಿರಾ ಇಲ್ಲಿದೆ ನೋಡಿ....

ಹೀಗೆ ಗುಂಪಾಗಿ ನಿಂತುಕೊಂಡು ಶಾಸಕ ಅರವಿಂದ ಬೆಲ್ಲದ ವಿರುದ್ಧ ಹಿಡಿಶಾಪ ಹಾಕುತ್ತಿರುವ ಈ ಅಮಾಯಕ ಜನರು ಹುಬ್ಬಳ್ಳಿಯ ಗೋಕುಲ್ ರಸ್ತೆಯ ಜಗದೀಶ್ ನಗರದ ನಿವಾಸಿಗಳು. ಇವರು ಹುಬ್ಬಳ್ಳಿ ವಿಮಾನ ನಿಲ್ದಾಣ ವಿಸ್ತರಣೆಗಾಗಿ ಮನೆ ಕಳೆದುಕೊಂಡವರು. ಆದರೆ ಇವರಿಗೆ ಬೇರೊಂದು ಸ್ಥಳದಲ್ಲಿ ಮನೆ ನಿರ್ಮಾಣ ಮಾಡಿ ಕೊಡುತ್ತೇವೆಂದು ಜನಪ್ರತಿನಿಧಿಗಳು ಹೇಳಿದ್ದರು. ಮನೆನೂ ನಿರ್ಮಾಣ ಮಾಡಿ ಕೊಟ್ಟಿದ್ದಾರೆ. ಆದರೆ ಅವೆಲ್ಲ ಮನೆಗಳು ಅವ್ಯವಸ್ತೆಯಿಂದ ಕೂಡಿವೆ. ಸರಿಯಾದ ಮೂಲಭೂತ ಸೌಕರ್ಯಗಳು ಇಲ್ಲ‌. ಅಷ್ಟೇ ಅಲ್ಲದೆ ಮನೆಯನ್ನು ಕಳೆದುಕೊಂಡವರಿಗೆ ಸರಿಯಾಗಿ ಹಂಚುತ್ತಿಲ್ಲ. ಕೇಳಲು ಹೋದರೆ ರೌಡಿಗಳಿಂದ ಬೆದರಿಕೆ ಹಾಕಿಸುತ್ತಾರಂತೆ. ಅದಕ್ಕೆ ಇದೇ 12 ರಂದು ಶಾಸಕ ಅರವಿಂದ ಬೆಲ್ಲದ್ ಅವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತೆವೆಂದು ವಾರ್ನ್ ಮಾಡಿದ್ದಾರೆ.

ತಾವೇ ಮತವನ್ನು ಹಾಕಿ ನಾಯಕರನ್ನಾಗಿ ಮಾಡಿದ ಶಾಸಕ ಅರವಿಂದ ಬೆಲ್ಲದ್ ಅವರು ನಮಗೆ ಮೋಸ ಮಾಡಲ್ಲ. ನಮಗೆ ಒಳ್ಳೆಯ ದಾರಿ ತೋರಿಸುತ್ತಾರೆಂದು ನಂಬಿ ವಿಮಾನ ನಿಲ್ದಾಣಕ್ಕೆ ತಮ್ಮ ಜಾಗ ಮನೆಗಳನ್ನು ಬಿಟ್ಟು ಕೊಟ್ಟಿದ್ದಾರೆ. ಆದರೆ ಶಾಸಕ ಅರವಿಂದ್ ಬೆಲ್ಲದ ಅವರು ಈ ಬಡ ಜನರನ್ನು ನಡು ನೀರಿನಲ್ಲೇ ಬಿಟ್ಟಿರೋದು ಎಷ್ಟು ಸರಿ ಎಂಬುದೇ ಸದ್ಯದ ಪ್ರಶ್ನೆ.

ಈರಣ್ಣ ವಾಲಿಕಾರ,ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ

Edited By : Manjunath H D
Kshetra Samachara

Kshetra Samachara

09/04/2022 04:07 pm

Cinque Terre

43.18 K

Cinque Terre

13

ಸಂಬಂಧಿತ ಸುದ್ದಿ