ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ನೂತನ ಗೋದಾಮು, ಕಡಲೆ ಖರೀದಿ ಕೇಂದ್ರ ಉದ್ಘಾಟನೆ

ಕುಂದಗೋಳ: ಈ ಮೊದಲೇ ಉದ್ಘಾಟನೆ ಕಾಣಬೇಕಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಕೋವಿಡ್ ಕಾರಣಾಂತರಗಳಿಂದ ಇಂದು ಉದ್ಘಾಟನೆ ಕಂಡಿವೆ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದ್ದಾರೆ.

ಕುಂದಗೋಳ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನೂತನ ಸಾವಿರ ಮೇಟ್ರಿಕ್ ಟನ್ ಸಾಮರ್ಥ್ಯದ ಗೋದಾಮು, ಮುಚ್ಚು ಹರಾಜುಕಟ್ಟೆ ಹಾಗೂ ಕಡಲೆ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ವರ್ಷ ರೈತರು ಒತ್ತಾಯಕ್ಕಿಂತ ಮೊದಲೇ ಕಡಲೆ ಕೇಂದ್ರ ಆರಂಭವಾಗಿದೆ. ಇದರ ಸದುಪಯೋಗ ಬಹುಮುಖ್ಯ ಎಂದರು.

ಬಳಿಕ ಜಿ.ಪಂ ಮಾಜಿ ಸದಸ್ಯ ಉಮೇಶ್ ಹೆಬಸೂರ ಮಾತನಾಡಿ, ಕೃಷಿ ಉತ್ಪನ್ನ ಮಾರುಕಟ್ಟೆ ಅಭಿವೃದ್ಧಿ ಎಡೆಗೆ ಸಾಗಲಿ ಎಂದರು. ಎಪಿಎಂಸಿ ಅಧ್ಯಕ್ಷ ಚನ್ನಬಸನಗೌಡ ಮಾತನಾಡಿ, ನಮ್ಮ ಅವಧಿಯಲ್ಲಿ 22 ವರ್ತಕರಿಗೆ ಎಪಿಎಂಸಿ ಖುಲ್ಲಾ ಜಾಗ ಟೆಂಡರ್ ಆಗಿವೆ. ಅಲ್ಲಿ ವ್ಯಾಪಾರಿ ಮಳಿಗೆಯಾದರೆ ಮಾರುಕಟ್ಟೆಗೆ ಆದಾಯ ಬರಲಿದೆ ಎಂದರು.

ಬಳಿಕ ಶಾಸಕಿ ಕುಸುಮಾವತಿ ಶಿವಳ್ಳಿ ಸೇರಿದಂತೆ ಎಪಿಎಂಸಿ ಸರ್ವ ಸದಸ್ಯರು ಆಡಳಿತ ಮಂಡಳಿ, ಜಿ.ಪಂ ಮಾಜಿ ಸದಸ್ಯರು, ಪ.ಪಂ ಅಧ್ಯಕ್ಷರಿಗೆ ಸನ್ಮಾನ ಮಾಡಲಾಯಿತು.

Edited By : Manjunath H D
Kshetra Samachara

Kshetra Samachara

12/03/2022 09:07 pm

Cinque Terre

24.57 K

Cinque Terre

0

ಸಂಬಂಧಿತ ಸುದ್ದಿ