ಹುಬ್ಬಳ್ಳಿ: ಕಳೆದ ಮೂರು ವರ್ಷಗಳಿಂದ ಧಾರವಾಡ ಜಿಲ್ಲೆಯಲ್ಲಿ ಕಡಲೆ ಬೆಳೆದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ನಿರಂತರವಾಗಿ ಸುರಿದ ಮಳೆಯಿಂದಾಗಿ ಕಡಲೆ ಬೆಳೆ ನೀರು ಪಾಲಾಗಿ ಅಳೆದು ಉಳಿದ ಬೆಳೆಯನ್ನು ಮಾರಾಟ ಮಾಡಿದ್ದರು. ಹಲವು ರೈತರು ಇನ್ನು ಮುಂದೆ ಕಡಲೆ ಬೆಳೆಯುವುದೇ ಬೇಡ ಅಂತ ಪರ್ಯಾಯ ಬೆಳೆ ಮೊರೆ ಹೋಗಿದ್ದರು. ಆದರೆ ಈ ವರ್ಷ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಕಡಲೆ ಬೆಳೆದ ರೈತರಿಗೆ ವರದಾನವಾಗಿದೆ. ಬೆಳೆ ಕಟಾವು ಮಾಡುವು ಸಂದರ್ಭದಲ್ಲಿ ಕಡಿಮೆ ಮಳೆಯಾದ ಹಿನ್ನೆಲೆ ಬೆಳೆ ಹಾನಿಯಾಗಿಲ್ಲ. ಹೀಗಾಗಿ ಸಾಕಷ್ಟು ಪ್ರಮಾಣದ ಕಡಲೆ ಬೆಳೆ ಬಂದಿದೆ, ಆದ್ರೆ ಇದನ್ನ ಮಾರಾಟ ಮಾಡಲು ರೈತರಿಗೆ ಸಾಧ್ಯವಾಗುತ್ತಿಲ್ಲ. ರೈತರ ಬಳಿ ಬೆಳೆ ಇದ್ದರೂ ಈಗ ಮಾರಲಾಗದ ಸ್ಥಿತಿ ನಿರ್ಮಾಣವಾಗಿದೆ.
ಹೌದು. ಈ ಭಾಗದ ರೈತರ ನಿರಂತರ ಹೋರಾಟ ಬಳಿಕ ಕೇಂದ್ರ ಸರ್ಕಾರ ಕಡಲೆಗೆ ಬೆಂಬಲ ಬೆಲೆ ಘೋಷಣೆ, ಜಿಲ್ಲೆಯಲ್ಲಿ 22 ಕಡಲೆ ಖರೀದಿ ಕೇಂದ್ರಗಳನ್ನ ಓಪನ್ ಮಾಡಿದೆ. ಆದ್ರೆ ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎನ್ನುವ ರೀತಿ ಗುಣಮಟ್ಟದ ಕಡಲೆಯನ್ನ ರೈತರು ಮಾರುಕಟ್ಟೆಗೆ ತರುತ್ತಿಲ್ಲವೆಂದು ಅಧಿಕಾರಿಗಳು ಕುಂಟು ನೆಪ ಹೇಳಿ ರೈತರು ಬೆಳೆದ ಕಡಲೆಯನ್ನು ಹಿಂದಕ್ಕೆ ಕಳುಹಿಸುತ್ತಿದ್ದಾರೆ. ಕಡಲೆ ಖರೀದಿ ಕೇಂದ್ರಗಳಲ್ಲಿ ರೈತರು ಮೊದಲೇ ಆನ್‌ಲೈನ್ ಮೂಲಕ ನೋಂದಣಿ ಮಾಡಿದ್ದಾರೆ. ಆದ್ರೆ, ಸರದಿ ಬಂದ ದಿನ ಖರೀದಿ ಕೇಂದ್ರಕ್ಕೆ ಕಡಲೆ ತೆಗೆದುಕೊಂಡು ಹೋದರೆ, ಸಣ್ಣಮಟ್ಟ ಮಣ್ಣು ಹಾಗೂ ಹರಳು ಇವೆ ಎಂದು ವಾಪಸ್ ಕಳುಹಿಸುತ್ತಿದ್ದಾರೆ. ಇದು ರೈತರನ್ನ ಕಂಗಾಲಾಗಿಸಿದೆ.
ಖರೀದಿ ಕೇಂದ್ರಕ್ಕೆ ಕಡಲೇ ತರಲು ರೈತರಿಗೆ ಪ್ರತಿ ಚೀಲಕ್ಕೆ ಸಾಗಣೆ ವೆಚ್ಚ 100 ರೂ. ತಗಲುತ್ತದೆ. ಆದ್ದರಿಂದ ಸರ್ಕಾರ ಸಣ್ಣ ಪುಟ್ಟ ಸಮಸ್ಯೆಗಳಿಂದ ರೈತರ ಕಡಲೆಯನ್ನು ವಾಪಸ್ ಕಳುಹಿಸದೇ ರೈತರೊಂದಿಗೆ ಸಹಕರಿಸಬೇಕಿದೆ. ಕಡಲೆ ಉತ್ತರ ಕರ್ನಾಟಕ ಭಾಗದ ಪ್ರಮುಖ ಬೆಳೆಗಳಲ್ಲಿ ಒಂದು. ರೈತರ ನಿರಂತರ ಹೋರಾಟ ಬಳಿಕ ಕಡಲೆ ಬೆಳೆಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿ ಖರೀದಿ ಮಾಡ್ತಿದೆ. ಆದ್ರೆ ಅಧಿಕಾರಿಗಳು ಮಾತ್ರ ಕಡಲೆ ಗುಣಮಟ್ಟದ್ದಿಲ್ಲ ಅಂತ ಮಾರಾಟಕ್ಕೆ ತಂದ ಕಡಲೆಯನ್ನ ರಿಜೆಕ್ಟ್ ಮಾಡ್ತಿದ್ದಾರೆ. ಇದು ರೈತರಿಗೆ ತೀವ್ರ ಸಂಕಷ್ಟ ತಂದೊಡ್ಡಿದೆ. ಗುಣಮಟ್ಟದ ಕಡಲೆಯನ್ನ ರೈತರು ಮಾರುಕಟ್ಟೆಗೆ ತರುತ್ತಿಲ್ಲ ಅಂತ ಸಬೂಬು ಹೇಳ್ತಾ ರೈತರಿಗೆ ಸುಖಾಸುಮ್ಮನೆ ಹಿಂಸೆ ಕೊಡ್ತಿದ್ದಾರೆ. ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ಈ ಕೂಡಲೆ ಮಧ್ಯ ಪ್ರವೇಶಿಸಿ ಅನ್ನದಾತನಿಗೆ ಆಗ್ತಿರೋ ಅನ್ಯಾಯ ಸರಿ ಪಡಿಸಬೇಕಿದೆ. ಬೆಂಬಲ ಬೆಲೆ ಅಡಿಯಲ್ಲಿ ಕಡಲೇ ಖರೀದಿಸಬೇಕಿದೆ..
ಧಾರವಾಡ ಜಿಲ್ಲೆಯಲ್ಲಿ 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆಯಲಾಗಿದ್ದು, ಪ್ರತಿ ಕ್ಬಿಂಟಾಲಗೆ 5300 ರೂಪಾಯಿ ಬೆಂಬಲ ಬೆಲೆಯಡಿಯಲ್ಲಿ ಸರಕಾರ ಖರೀದಿ ಮಾಡಬೇಕಿದೆ. ಈ ವರ್ಷ ಉತ್ತಮ ಫಸಲು ಬಂದಿದ್ದು ಸರಕಾರ ಸೂಕ್ತ ಸಮಯದಲ್ಲಿ ಖರೀದಿ ಮಾಡಿ ರೈತರ ನೆರವಿಗೆ ಬರಬೇಕಿದೆ....
Kshetra Samachara
21/04/2022 01:43 pm