ಹುಬ್ಬಳ್ಳಿ: ಎಲ್ಲರೂ ಒಂದಾಗಿರಲಿ, ಒಗ್ಗಟ್ಟು ಬೆಳೆಯಲಿ ಎಂದು ಸರ್ಕಾರ ಹಲವಾರು ಸಮುದಾಯಗಳಿಗೆ ಭವನ ಕಟ್ಟಲು ಅನುದಾನ ನೀಡಿದೆ. ಆದ್ರೆ ಅದೇ ಭವನದ ಕಾಮಗಾರಿಯಲ್ಲಿ ಸಂಘದ ಅಧ್ಯಕ್ಷರೇ ಅವ್ಯವಹಾರ ಮಾಡುತ್ತಿದ್ದಾರೆಂದು ಸಂಘದ ಸದಸ್ಯರು ನೇರ ಆರೋಪ ಮಾಡುತ್ತಿದ್ದಾರೆ.
ಹೌದು,,,, ಧಾರವಾಡದ ಗಾಂಧಿನಗರದಲ್ಲಿ ನಡೆಯುತ್ತಿರುವ ಸರ್ವಜ್ಞ ಸಮುದಾಯ ಭವನ ನಿರ್ಮಾಣ ಕಾಮಗಾರಿಯಲ್ಲಿ 5 ಲಕ್ಷಕ್ಕೂ ಹೆಚ್ಚಿನ ಅವ್ಯವಹಾರ ನಡೆದಿದೆ. 2012 ರಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಅನುದಾನ ಖರ್ಚು ಮಾಡಲಾಗಿದೆ ಎಂದು ಸಮಿತಿ ಹೇಳಿದೆ. ಆದರೆ , ಅಷ್ಟು ವೆಚ್ಚದಲ್ಲಿ ಕಾಮಗಾರಿ ನಡೆದಿಲ್ಲ. 2006 ರಲ್ಲಿ ಹು-ಡಾ ದಿಂದ ಸಂಘಕ್ಕೆ ನಿವೇಶನ ಮಂಜೂರಾಗಿದೆ. ಕಾಮಗಾರಿಗೆ 2008 ರಲ್ಲಿ ಭೂಮಿಪೂಜೆ ಸಹ ನೆರವೇರಿಸಲಾಗಿದೆ. ಕಟ್ಟಡ ರಚನಾ ಸಮಿತಿ ರಚಿಸಲಾಗಿದ್ದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 5 ಲಕ್ಷ ರೂಪಾಯಿ, ಶಾಸಕರಾಗಿದ್ದ ಚಂದ್ರಕಾಂತ ಬೆಲ್ಲದ 10 ಲಕ್ಷ ರೂಪಾಯಿ, ಸಂಸದ ಪ್ರಹ್ಲಾದ ಜೋಶಿ 5 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿದ್ರಂತೆ.
ಇನ್ನು 2016 ರಿಂದ ಜಿಲ್ಲಾ ಸಂಘದ ಮರುನೋಂದಣಿಯಾಗಿಲ್ಲ. ನಿರ್ಮಾಣದಲ್ಲಿ ಅವ್ಯವಹಾರ ನಡೆದಿದ್ದು , ಕಟ್ಟಡ ರಚನಾ ಸಮಿತಿಯಿಂದ 8 ಲಕ್ಷ ವಸೂಲಿ ಮಾಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 2016 ರಲ್ಲಿ ಆದೇಶಿಸಿದೆ. ಇದುವರೆಗೆ ಪಾಲನೆಯಾಗಿಲ್ಲ. ಕಟ್ಟಡ ಸಮಿತಿ ಹಾಗೂ ಜಿಲ್ಲಾ ಕುಂಬಾರ ಸಂಘ ಅವ್ಯವಹಾರದಲ್ಲಿ ಭಾಗಿಯಾಗಿದೆ ಎಂದು ತಿಳಿಸಿದರು. ಸರ್ಕಾರದ ಹಣದ ದುರುಪಯೋಗವಾಗುತ್ತಿರುವುದನ್ನು ತಡೆಯಬೇಕು. ಈ ಹಿಂದೆ ಹೊರಡಿಸಿದ್ದ ಆದೇಶ ಜಾರಿ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಂಘದ ಸದಸ್ಯರು ಆಗ್ರಹಿಸಿದರು.
Kshetra Samachara
14/06/2022 01:09 pm