ಕಲಘಟಗಿ:ಪಟ್ಟಣದ ಮಾಚಾಪೂರ ಹತ್ತಿರ ಕಬ್ಬಿನ ಹೊಲಗಳಲ್ಲಿ ಬೀಡು ಬಿಟ್ಟ ಆನೆಗಳ ಕಾರ್ಯಾಚರಣೆ ಸ್ಥಳಕ್ಕೆ ಶಾಸಕ ಸಿ ಎಂ ನಿಂಬಣ್ಣವರ ಭೇಟಿ ನೀಡಿದರು.
ಈ ಭಾಗದಲ್ಲಿ ಆನೆಗಳ ದಾಳಿ ತಪ್ಪಿಸಲು ಟ್ರೆಂಚ್ ನಿರ್ಮಾಣಕ್ಕೆ ಕಳೆದ ಬಾರಿ ಸರಕಾರ 50 ಲಕ್ಷ ರೂ ನೀಡಿತ್ತು.ಮುಂದಿನ ಅಧಿವೇಶನದಲ್ಲಿ ಅರಣ್ಯ ಸಚಿವರ ಗಮನಕ್ಕೆ ತಂದು ಟ್ರೆಂಚ್ ನಿರ್ಮಾಣಕ್ಕೆ ಮತ್ತೆ ಅನುದಾನ ಬಿಡುಗಡೆ ಮಾಡಲು ಪ್ರಯತ್ನಿಸಲಾಗುವುದು ಎಂದರು.
ವಲಯ ಅರಣ್ಯಾಧಿಕಾರಿ ಶ್ರೀಕಾಂತ ಪಾಟೀಲ, ದೂಡ್ಡಮನಿ,ಪರಶುರಾಮ ರಜಪೂತ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.
Kshetra Samachara
03/12/2020 09:33 pm