ಕುಂದಗೋಳ : ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು ಮತದಾನಕ್ಕೆ ಆಗಮಿಸುವ ಮತದಾರರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಿ ಒಳ ಬಿಡಲಾಗುತ್ತಿದ್ದು ಮಾಸ್ಕ್ ಇಲ್ಲದವರಿಗೆ ಮಾಸ್ಕ್ ನೀಡಿ ಸಾಮಾಜಿಕ ಅಂತರದ ಬಾಕ್ಸ್ ಕ್ರಮಾನುಸಾರ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸದ್ಯ ಮತದಾನಕ್ಕೆ ಆಗಮಿಸುವ ಪದವೀಧರರ ಪ್ರಮಾಣ ಹೆಚ್ಚಿದ್ದು ಮತಗಟ್ಟೇ ಸುತ್ತಲೂ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು ಚುನಾವಣೆ ಕಾರಣ ತಹಶೀಲ್ದಾರ ಕಚೇರಿ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಿದ್ದು ಮಾರ್ಕೇಟ್ ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಾಹನ ಹಾಗೂ ಜನರ ದಟ್ಟಣೆ ಉಂಟಾಗಿ ಕೆಲಹೊತ್ತು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಯಿತು ನಂತರ ಪೊಲೀಸರು ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಮಾಜಿ ಶಾಸಕ ಎಮ್.ಎಸ್.ಅಕ್ಕಿ ಮತ ಚಲಾಯಿಸಿ ಹೊರ ಬಂದರೇ ಶಾಸಕಿ ಕುಸುಮಾವತಿ ಶಿವಳ್ಳಿ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿ ಚುನಾವಣೆ ವ್ಯವಸ್ಥೆ ಪರಿಶೀಲನೆ ನಡೆಸಿದರು.
Kshetra Samachara
28/10/2020 03:09 pm