ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಗಳಗಿ ಗ್ರಾ ಪಂ ನಲ್ಲಿ ಅವ್ಯವಹಾರ ತನಿಖೆ ಯಾವಾಗ ಎಂದ ಗ್ರಾಮಸ್ಥರು

ಕಲಘಟಗಿ: ಕಲಘಟಗಿ ತಾಲೂಕಿನ ಗಳಗಿ ಗ್ರಾ ಪಂ ನಲ್ಲಿ ಹದಿನಾಲ್ಕನೇ ಹಣಕಾಸು ಅನುದಾನದಲ್ಲಿ ಅವ್ಯಹಾರವಾಗಿದೆ ಎಂದು ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿ ತನಿಖೆಗೆ ಒತ್ತಾಯಿಸಿದ ಘಟನೆ ನಡೆಯಿತು. ಗಳಗಿ ಗ್ರಾಮ ಪಂಚಾಯತಿಯ 2018-2019,2019-2020,2020-2021 ನೇ ಸಾಲಿನ 14 ನೇ ಹಣಕಾಸು ಅನುದಾನುದಾನದಲ್ಲಿ ಯಾವುದೇ ಕಾಮಗಾರಿಯನ್ನು ಮಾಡದೇ ಬಿಲ್ಲ ತೆಗೆದಿದ್ದಾರೆ ಹಾಗೂ ಸುಳ್ಳು,ಕಳಪೆ ಕಾಮಗಾರಿ ಮಾಡಿ ಸುಮಾರು 86 ಲಕ್ಷ ರೂಪಾಯಿ ಸರಕಾರದ ಹಣ ದುರುಪಯೋಗ ಮಾಡಲಾಗಿದೆ ಎನ್ನುವ ಆರೋಪಗಳು ದಟ್ಟವಾಗಿದ್ದು ತಪ್ಪಿತಸ್ಥರಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಇನ್ನೂ ಸ್ಥಳಕ್ಕೆ ತಾ ಪಂ ಇಒ ಎಂ ಎಸ್ ಮೇಟಿ ಭೇಟಿ ನೀಡಿ ಗ್ರಾಮಸ್ಥರ ಅಹ್ವಾಲು ಆಲಿಸಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯ ಅಣ್ಣಪ್ಪ ದೇಸಾಯಿ,ತಾ ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಈರಯ್ಯ ಸಿದ್ಧಾಪೂರಮಠ ಹಾಗೂ ಗ್ರಾಮದ ಹಿತರಿಯರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

12/10/2020 04:49 pm

Cinque Terre

15.92 K

Cinque Terre

0

ಸಂಬಂಧಿತ ಸುದ್ದಿ