ಧಾರವಾಡ: ಧಾರವಾಡ ಮದಿಹಾಳ ನಿವಾಸಿ ಸೌಭಾಗ್ಯ ಯಮನೂರ ಎಂಬ ಬುದ್ಧಿಮಾಂದ್ಯ ಮಗುವಿನ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ಪ್ರಸಾರ ಮಾಡಿದ ವರದಿಗೆ ಮಂಡ್ಯ ಸಂಸದೆ ಹಾಗೂ ನಟಿ ಸುಮಲತಾ ಅಂಬರೀಷ್ ಅವರು ಸ್ಪಂದಿಸಿದ್ದಾರೆ.
ಸೌಭಾಗ್ಯ ಬುದ್ಧಿಮಾಂದ್ಯ ಮಗುವಾದರೂ ಸುಮಲತಾ ಅವರ ಮೇಲೆ ಅಪಾರ ಅಭಿಮಾನ ಇಟ್ಟುಕೊಂಡಿದ್ದಾಳೆ. ಸುಮಲತಾ ಅವರ ಬಗ್ಗೆ ಸಾಕಷ್ಟು ಲೇಖನವನ್ನು ತನ್ನದೇ ಶೈಲಿಯಲ್ಲಿ ಬರೆದಿದ್ದಾಳೆ. ಅಲ್ಲದೇ ನ್ಯೂಸ್ ಪೇಪರ್‌ನಲ್ಲಿ ಬರುವ ಸುಮಲತಾ ಹಾಗೂ ಅಂಬರೀಷ್ ಅವರ ಚಿತ್ರವನ್ನು ಕಟ್ ಮಾಡಿ ಬುಕ್ಕಿಗೆ ಅಂಟಿಸುತ್ತಾಳೆ.
ಸುಮಲತಾ ಅವರ ಚಿತ್ರಗಳನ್ನು ನೋಡುವ ಸೌಭಾಗ್ಯ, ಯ್ಯೂಟೂಬ್‌ನಲ್ಲಿ ಸುಮಲತಾ ಅಂಬರೀಷ್ ಅವರ ಚಿತ್ರಗಳನ್ನೇ ನೋಡುತ್ತಾಳೆ. ಈ ವಿಶೇಷ ಚೇತನ ಮಗುವಿನ ವಿಶೇಷ ಆಸೆ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಪ್ರಸಾರ ಮಾಡಿತ್ತು. ವರದಿ ನೋಡಿರುವ ಸುಮಲತಾ ಅವರು, ತಮ್ಮ ಫೇಸ್ಬುಕ್ ಖಾತೆಯಲ್ಲಿ ಪಬ್ಲಿಕ್ ನೆಕ್ಸ್ಟ್ ಪ್ರಸಾರ ಮಾಡಿದ ವರದಿಯ ವೀಡಿಯೋ ಕೂಡ ಶೇರ್ ಮಾಡಿಕೊಂಡಿದ್ದಾರೆ.
ಅಲ್ಲದೇ, ನನ್ನ ಮೇಲಿನ ಅಭಿಮಾನದಿಂದಾಗಿ ಧಾರವಾಡದ ವಿಶೇಷ ಚೇತನ ಮಗು ಸೌಭಾಗ್ಯ ಯಮನೂರು ನಿತ್ಯವೂ ಪತ್ರಿಕೆಯಲ್ಲಿ ಬರುವ ನನ್ನ ಫೋಟೋಗಳನ್ನು ಕತ್ತರಿಸಿ ಪುಸ್ತಕದಲ್ಲಿ ಅಂಟಿಸಿ ಅಭಿಮಾನ ತೋರಿದ್ದಾರೆ. ಅವರು ನನ್ನ ಭೇಟಿಗೂ ಕಾದಿರುವ ಸುದ್ದಿ ಈ ವೀಡಿಯೋ ಮೂಲಕ ತಿಳಿಯಿತು. ಸದ್ಯ ನಾನು ಅಧಿವೇಶನದಲ್ಲಿದ್ದು, ಆದಷ್ಟು ಬೇಗ ಸೌಭಾಗ್ಯರನ್ನು ಭೇಟಿ ಮಾಡಿವೆ. ಆಕೆಯ ಆಸೆ ಈಡೇರಿಸುವೆ. ನಿಮ್ಮ ಅಭಿಮಾನವೇ ನನ್ನ ಶಕ್ತಿ. ಧನ್ಯವಾದಗಳು ಸೌಭಾಗ್ಯ ಎಂದ ಪೋಸ್ಟ್ ಕೂಡ ಹಾಕಿದ್ದಾರೆ. ವರದಿ ಪ್ರಸಾರವಾದ ಕೂಡಲೇ ಸಕಾರಾತ್ಮಕ ಸ್ಪಂದನೆ ನೀಡಿರುವ ಸುಮಲತಾ ಅವರಿಗೆ ನಾವೂ ಧನ್ಯವಾದ ಸಲ್ಲಿಸಲೇಬೇಕಲ್ಲವೇ?
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/04/2022 12:40 pm