ಹುಬ್ಬಳ್ಳಿ: ಕೆಳ ಸೇತುವೆ ಅಂದಾಕ್ಷಣ ಎಲ್ಲರ ಗಮನಕ್ಕೆ ಬರುವುದು ಒಂದು ಚಿತ್ರಣ. ಆದರೆ ಇಲ್ಲಿರುವ ಒಂದು ಕೆಳ ಸೇತುವೆಯ ಚಿತ್ರಣವನ್ನು ನೋಡಿದರೇ ನಿಮ್ಮ ಚಿತ್ತವೇ ಬದಲಾಗುತ್ತದೆ. ಅಲ್ಲದೇ ಈ ಕೆಳ ಸೇತುವೆಯ ಉಪಯುಕ್ತತೆ ಹಾಗೂ ವೈಶಿಷ್ಟ್ಯವನ್ನು ನೋಡಿದರೇ ನಿಜಕ್ಕೂ ಯಾವುದೇ ಪ್ರವಾಸಿ ಸ್ಥಳಕ್ಕಿಂತ ಕಡಿಮೆ ಇರದ ರೀತಿಯಲ್ಲಿ ನಿರ್ಮಾಣವಾಗಿದೆ.
ಹೌದು..ವಾಣಿಜ್ಯನಗರಿ ಹುಬ್ಬಳ್ಳಿಯ ಶಿರಡಿನಗರ ಹಾಗೂ ಉಣಕಲ್ ಸಂಪರ್ಕಿಸುವ ಉಣಕಲ್ ರೈಲ್ವೇ ನಿಲ್ದಾಣದ ಕೆಳಸೇತುವೆಯು ನಿಜಕ್ಕೂ ವರ್ಣರಂಜಿತವಾಗಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ನಿರ್ಮಾಣ ಮಾಡಲಾಗಿದ್ದು, ಈ ನಿರ್ಮಾಣ ಕಾರ್ಯವನ್ನು ನೋಡಿದರೇ ನಿಜಕ್ಕೂ ಸಂತೋಷವಾಗುತ್ತದೆ. ನೈಋತ್ಯ ರೈಲ್ವೆ ಸಾಕ್ಷ್ಯಚಿತ್ರ, ಸ್ವಚ್ಛ ಭಾರತದ ಪರಿಕಲ್ಪನೆ, ಹುಬ್ಬಳ್ಳಿಯ ಐತಿಹಾಸಿಕ ಹಿನ್ನೆಲೆಯನ್ನು ಪರಿಚಯಿಸುವ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ವರ್ಣರಂಜಿತ ಚಿತ್ರಗಳಿಂದ ಕೆಳ ಸೇತುವೆ ನಿಜಕ್ಕೂ ಮನಮೋಹಕವಾಗಿ ನಿರ್ಮಾಣವಾಗಿದೆ.
ಇನ್ನೂ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ಲೋಕಾರ್ಪಣೆ ಮಾಡಿದರು. 5.4 ಕೋಟಿ ರೂಪಾಯಿಗಳ ವೆಚ್ಚದಲ್ಲಿ, 33.66 ಮೀ .ಉದ್ದದ, 7.5 ಮೀ. ಅಗಲದ, 4.5 ಮೀ. ಎತ್ತರದ ಸೇತುವೆಯನ್ನು ನೈರುತ್ಯ ರೈಲ್ವೇ ನಿರ್ಮಿಸಿದೆ. ಉಣಕಲ್ ಹಾಗೂ ಶಿರಡಿನಗರ ಸಂಪರ್ಕಿಸುವ 65 ಮೀ.
ಉದ್ದದ ಕಾಂಕ್ರೀಟ್ ರಸ್ತೆ ಸಹ ನಿರ್ಮಿಸಲಾಗಿದೆ. ಇದರಿಂದ ರಾಜನಗರ , ಶಿರಡಿನಗರ , ಪರ್ತಕರ್ತ ನಗರ ಹಾಗೂ ಉಣಕಲ್ ನಡುವೆ ಓಡಾಟ ನಡೆಸುವ ವಾಹನ ಸವಾರಿಗೆ ಅನುಕೂಲವಾಗಿದೆ. ಉಣಕಲ್ ಪ್ರದೇಶದಲ್ಲಿ ರಸ್ತೆ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ. ಪುಣೆ - ಬೆಂಗಳೂರು ರಸ್ತೆಗೆ ರಾಜನಗರ , ಶಿರಾನಗರ , ಫಾರೆಸ್ಟ್ ಕಾಲೋನಿ ಮತ್ತು ಉಣಕಲ್ ಗ್ರಾಮಗಳನ್ನು ಸಂಪರ್ಕ ಪಡೆಯತ್ತವೆ. ಇನ್ನೂ ಈ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆದಾರ ವಿ.ಎಸ್.ವಿ.ಪ್ರಸಾದ ಅವರು ನಿರ್ಮಾಣ ಮಾಡಿದ್ದು, ಜನರು ಕೆಳ ಸೇತುವೆ ನೋಡಲು ಆಗಮಿಸುವಂತಾಗಿದೆ.
ನೈಋತ್ಯ ರೈಲ್ವೆಯ ಈ ಒಂದು ಕೆಳ ಸೇತುವೆ ನಿಜಕ್ಕೂ ಸಾಕಷ್ಟು ಉಪಯುಕ್ತವಾಗಿದ್ದು, ಸಾರ್ವಜನಿಕರು ನೈಋತ್ಯ ರೈಲ್ವೆ ವಲಯಕ್ಕೆ ಹಾಗೂ ಸ್ವರ್ಣಾ ಟೆಕ್ನೋ ಕನ್ಸ್ ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಮಾಲೀಕ ಡಾ.ವಿ.ಎಸ್.ವಿ ಪ್ರಸಾದ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಕೆಳ ಸೇತುವೆ ಚಿತ್ರಣವನ್ನೇ ಬದಲಿಸಿ ಹೊಸ ರೂಪವನ್ನು ಕೊಟ್ಟು ಸುಂದರವಾದ ಕೆಳ ಸೇತುವೆಯನ್ನು ನಿರ್ಮಾಣ ಮಾಡಲಾಗಿದ್ದು, ವಿ.ಎಸ್.ವಿ ಪ್ರಸಾದ ಅವರ ಕಾರ್ಯ ದಕ್ಷತೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
Kshetra Samachara
01/10/2021 05:17 pm